ADVERTISEMENT

ಸರಿಗಮಪದಲ್ಲಿ 40 ವಾದ್ಯ ವೈವಿಧ್ಯ; ಕನ್ನಡ ರಿಯಾಲಿಟಿ ಷೋದಲ್ಲಿ ಮೊದಲ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 21:00 IST
Last Updated 30 ಸೆಪ್ಟೆಂಬರ್ 2021, 21:00 IST
ಹಂಸಲೇಖ
ಹಂಸಲೇಖ   

ಝೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ಕಾರ್ಯಕ್ರಮ ಸರಿಗಮಪದಲ್ಲಿ 40 ಬಗೆಯ ವಾದ್ಯ ವೈವಿಧ್ಯ (ಸಿಂಫೋನಿ) ಪರಿಚಯಿಸಲಾಗಿದೆ ಎಂದಿದೆ ಈ ಕಾರ್ಯಕ್ರಮದ ನಿರ್ಮಾಣ ತಂಡ.

ಅದರಲ್ಲೇನು ವಿಶೇಷ ಎಂಬ ಪ್ರಶ್ನೆಗೆ ಈ ರಿಯಾಲಿಟಿ ಶೋದ ಉತ್ಕೃಷ್ಟತೆ ಹೆಚ್ಚಿಸಲು ಪ್ರಯತ್ನ ಸಾಗಿದೆ. ಅಂದಹಾಗೆ ಕನ್ನಡ ಟಿವಿ ವಾಹಿನಿಗಳ ರಿಯಾಲಿಟಿ ಷೋದಲ್ಲಿ ಮೊದಲ ಪ್ರಯೋಗ ಇದು ಎಂದಿದೆ ವಾಹಿನಿ.

‘ಕರ್ನಾಟಕದಲ್ಲಿ ಹಾಡುಗಳ ಹಬ್ಬ ಶುರುವಾಗಿದೆ. ಸಂಸ್ಕೃತಿ, ಮನೋರಂಜನೆ ಮತ್ತು ಭಾವನಾತ್ಮಕವಾದ ಶ್ರೀಮಂತ ವೇದಿಕೆ ಸರಿಗಮಪ ಚಾಂಪಿಯನ್ ಶಿಪ್. ಅದ್ವಿತೀಯ ಪ್ರತಿಭೆಗಳ ಈ ಸ್ವರ ಸಮರದ ಕಾರ್ಯಕ್ರಮವಿದು’ ಎಂಬುದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಬಣ್ಣನೆ.

ADVERTISEMENT

‘ತೀರ್ಪುಗಾರರಾಗಿ 36 ಹಾಡುಗಾರರನ್ನು 6 ತಂಡಗಳಾಗಿ ವಿಂಗಡಿಸುವುದು ಸವಾಲಾಗಿತ್ತು. ಹಂಸಲೇಖ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದೇವೆ’ ಎಂದು ಅರ್ಜುನ್‌ ಜನ್ಯ ಹೇಳಿದ್ದಾರೆ. ವಿಜಯ್‌ ಪ್ರಕಾಶ್‌ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರು ಮಂದಿ ಮಾರ್ಗದರ್ಶಕರು, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ಅವರು ತೀರ್ಪುಗಾರರಾಗಿದ್ದಾರೆ. ಅನುಶ್ರೀ ಅವರು ಕಾರ್ಯಕ್ರಮದ ನಿರೂಪಕಿ. ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.