
ದೀಪಿಕಾ ದಾಸ್
ಚಿತ್ರ: ಇನ್‌ಸ್ಟಾಗ್ರಾಂ
ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆಗೆ ನಟಿಯಾಗಿ ಪದಾರ್ಪಣೆ ಮಾಡಿ, ಬಿಗ್‌ಬಾಸ್ ಮನೆಗೆ ಕಾಲಿಟ್ಟು ಜನಪ್ರಿಯತೆ ಪಡೆದುಕೊಂಡಿದ್ದರು.
ಇತ್ತೀಚೆಗೆ ದೀಪಿಕಾ ದಾಸ್ ಅವರು ಪತಿ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ನಿಜವಾದ ವಯಸ್ಸನ್ನು ಬಹಿರಂಗ ಪಡಿಸಿದ್ದಾರೆ.
‘ನಾಗಿಣಿ’ ಧಾರಾವಾಹಿ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡ ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬ ಆಚರಣೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಸಕ್ರಿಯರಾಗಿರುವ ನಟಿ, ದೇಶ ವಿದೇಶ ಪ್ರವಾಸ ಮಾಡಿದ ವಿಡಿಯೊಗಳು ಹಾಗೂ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಇದೀಗ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಪತಿ ದೀಪಕ್ ದುಬಾರಿ ಉಡುಗೊರೆಯನ್ನು ಕೊಟ್ಟಿದ್ದಾರೆ.
2024ರ ಮಾರ್ಚ್ 1ರಂದು ಉದ್ಯಮಿ ದೀಪಕ್ ಜೊತೆಗೆ ದೀಪಿಕಾ ದಾಸ್ ಅವರು ಗೋವಾದಲ್ಲಿ ಅದ್ಧೂರಿಯಾಗಿ 'ಡೆಸ್ಟಿನೇಷನ್ ವೆಡ್ಡಿಂಗ್' ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.