ADVERTISEMENT

ಬಾಲ್ಯದ ಕನಸು ನನಸಾಗಿದೆ; ನಿರ್ಮಾಪಕ ಕರಣ್ ಜೋಹರ್ ಭೇಟಿಯಾದ ದಿಶಾ ಮದನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 11:54 IST
Last Updated 11 ಫೆಬ್ರುವರಿ 2026, 11:54 IST
<div class="paragraphs"><p>ನಿರ್ಮಾಪಕ ಕರಣ್ ಜೋಹರ್, ದಿಶಾ ಮದನ್</p></div>

ನಿರ್ಮಾಪಕ ಕರಣ್ ಜೋಹರ್, ದಿಶಾ ಮದನ್

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ ನಟಿ ದಿಶಾ ಮದನ್ ಅವರ ಬಾಲ್ಯದ ಕನಸು ನನಸಾಗಿದೆ. ಇತ್ತೀಚೆಗೆ ನಟಿ ದಿಶಾ ಮದನ್‌ ಹಾಲಿವುಡ್ ರಿಪೋರ್ಟರ್ ಇಂಡಿಯಾ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಅವರು ಬಾಲಿವುಡ್‌ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿಯಾಗಿ ಸಖತ್‌ ಖುಷಿಪಟ್ಟಿದ್ದಾರೆ.

ADVERTISEMENT

ನಿರ್ಮಾಪಕ ಕರಣ್ ಜೋಹರ್, ದಿಶಾ ಮದನ್

ದಿಶಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಕರಣ್ ಜೋಹರ್ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಬಾಲ್ಯದಿಂದಲೂ ಕರಣ್ ಜೋಹರ್​ ಅವರನ್ನು ನೋಡುತ್ತಾ ಬೆಳೆದವಳು. ಇದೀಗ ಅವರ ಪಕ್ಕದಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ’ ಎಂದು ಬರೆದಿಕೊಂಡಿದ್ದಾರೆ.

ನಟಿ ದಿಶಾ ಮದನ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿ​ ದಿಶಾ ಅವರು ಸಿದ್ದೇಗೌಡ್ರರ ಹೆಂಡತಿ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆರೆ ಮೇಲೆ ತುಂಬಾ ಮುಗ್ಧ ಹುಡುಗಿಯಾಗಿ ನಟಿಸುತ್ತಿರುವ ದಿಶಾ ಅವರು, ನಿಜ ಜೀವನದಲ್ಲಿ ಸಖತ್ ಗ್ಲಾಮರಸ್ ಆಗಿದ್ದಾರೆ. ಇನ್ನು, ಕಳೆದ ವರ್ಷ ದಿಶಾ ಮದನ್ ಅವರು ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.