ADVERTISEMENT

ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ ರಾಮಾಚಾರಿ ಖ್ಯಾತಿಯ ನಟಿ ಐಶ್ವರ್ಯ ಸಾಲಿಮಠ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2025, 7:38 IST
Last Updated 15 ಡಿಸೆಂಬರ್ 2025, 7:38 IST
<div class="paragraphs"><p>ನಟಿ ಐಶ್ವರ್ಯ ಸಾಲಿಮಠ ದಂಪತಿ</p></div>

ನಟಿ ಐಶ್ವರ್ಯ ಸಾಲಿಮಠ ದಂಪತಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡ ಕಿರುತೆರೆ ನಟಿ ಐಶ್ವರ್ಯ ಸಾಲಿಮಠ ಅವಳಿ–ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಐಶ್ವರ್ಯ ಸಾಲಿಮಠ ಹಾಗೂ ವಿನಯ್​ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಅಗ್ನಿಸಾಕ್ಷಿ ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಪಾತ್ರದಲ್ಲಿ ನಟಿ ನಟಿಸಿದ್ದರು. ಹೆಚ್ಚಾಗಿ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡ ನಟಿ ಐಶ್ವರ್ಯ ಸಾಲಿಮಠ ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಟಿ ಐಶ್ವರ್ಯ ಸಾಲಿಮಠ ಹಾಗೂ ಪತಿ ವಿನಯ್

ಇತ್ತೀಚೆಗಷ್ಟೇ ನಟಿ ಐಶ್ವರ್ಯ ಸಾಲಿಮಠ ಅವರ ಸೀಮಂತ ಶಾಸ್ತ್ರ ನೆರವೇರಿತ್ತು. ಸೀಮಂತ ಶಾಸ್ತ್ರದ ಫೋಟೊಗಳನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದೀಗ ಅವಳಿ–ಜವಳಿ ಗಂಡು ಮಕ್ಕಳು ಜನಿಸಿದ ವಿಚಾರ ತಿಳಿದ ಕೂಡಲೇ ನಟಿಯ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.