ಬಿಗ್‌ಬಾಸ್‌ನಲ್ಲಿ ಇದೀಗ ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆಯುತ್ತಿದ್ದು, ಇದು ಮನೆಮಂದಿಯ ನಡುವೆ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ.
ಕಾರ್ತಿಕ್ ಮತ್ತು ಸಂಗೀತಾ ಮಧ್ಯೆ ಮತ್ತೆ ಅಸಮಾಧಾನದ ಹೊಗೆ ಹೊತ್ತಿಕೊಂಡಿದೆ. ಟಾಸ್ಕ್‌ನ ಭಾಗವಾಗಿ ಒಬ್ಬರನ್ನು ಆಟದಿಂದ ಹೊರಗಿಡುವ ಅಧಿಕಾರ ಸಂಗೀತಾ ಅವರಿಗೆ ಸಿಕ್ಕಂತಿದೆ. ಈ ನಡುವೆ ವಿನಯ್ ಅವರು ಸಂಗೀತಾಗೆ ‘ಟಾಸ್ಕ್‌ನಲ್ಲಿ ಒಬ್ಬರನ್ನು ತೆಗೆದು ಒಬ್ಬರನ್ನು ಸೇರಿಸುವುದಕ್ಕೆ ಬಿಗ್‌ಬಾಸ್ ಅವಕಾಶ ಕಲ್ಪಿಸಿ ಕೊಡಬಹುದು’ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಗೀತಾ, ಆ ರೀತಿಯ ಅವಕಾಶ ಸಿಕ್ಕರೆ ‘ನಾನು ಮೊದಲು ಕಾರ್ತಿಕ್ ಅವರನ್ನೇ ಆಟದಿಂದ ಹೊರಗಿಡುತ್ತೇನೆ’ ಎಂದಿದ್ದಾರೆ.
‘ಟಾಸ್ಕ್ ವೇಳೆ ನನಗೆ ಕಾರ್ತಿಕ್ ಆಡುವುದು ಇಷ್ಟವಿಲ್ಲ. ಹಾಗಾಗಿ ಅವರನ್ನು ಹೊರಗಿಡುತ್ತಿದ್ದೀನಿ’ ಎಂದು ಸಂಗೀತಾ ಹೇಳಿರುವ ದೃಶ್ಯಗಳು ಜಿಯೊ ಸಿನಿಮಾ ಬಿಡುಗಡೆ ಮಾಡಿರುವ ವಿಡಿಯೊದಲ್ಲಿದೆ.
ಟಾಸ್ಕ್ ಮುಗಿದ ಬಳಿಕ ಕಾರ್ತಿಕ್, ‘ವುಮನ್ ಕಾರ್ಡ್’ ಎಂದು ಸಂಗೀತಾ ಅವರನ್ನು ಟೀಕಿಸಿದ್ದಾರೆ. ಅವರ ಮಾತು ಕೇಳಿ ಸಿಟ್ಟಿಗೆದ್ದ ಸಂಗೀತಾ ಕೂಡ ಕಿರುಚಾಡಿ, ‘ಇದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಆಪ್ತ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಜಗಳದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಇದರ ಪರಿಣಾಮ ಏನಾಗುತ್ತದೆ? ಎಂಬುವುದು ಕಾದು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.