ADVERTISEMENT

Big Boss 8: ತಪ್ಪೆಸಗಿದ 6 ಸ್ಪರ್ಧಿಗಳ ಮುಖಕ್ಕೆ ಮಸಿ, ಕ್ಯಾಪ್ಟನ್ ಆದ ರಾಜೀವ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 6:58 IST
Last Updated 12 ಮಾರ್ಚ್ 2021, 6:58 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ 11ನೆ ದಿನ ಗಲಾಟೆ, ಗದ್ದಲಗಳಿಲ್ಲದೆ ಕಳೆದಿದೆ. ಎರಡು ದಿನಗಳ ಕ್ವಾರಂಟೈನ್ ಟಾಸ್ಕ್‌ನಲ್ಲಿ ಪರಸ್ಪರ ಕಿತ್ತಾಟ, ಬೈಗುಳದಲ್ಲೇ ಕಳೆದಿದ್ದ ಸ್ಪರ್ಧಿಗಳು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇನ್ನೂ ಕ್ಯಾಪ್ಟನ್ಸಿಗೆ ನಡೆದ ಟಾಸ್ಕ್‌ನಲ್ಲಿ ರಾಜೀವ್ ಗೆದ್ದು ಬೀಗಿದ್ದಾರೆ.

ಮಸಿ ಬಳಿಸಿಕೊಂಡ 6 ಸ್ಪರ್ಧಿಗಳು: ಎರಡು ದಿನಗಳ ಕಾಲ ನಡೆದ ಕ್ವಾರಂಟೈನ್ ಟಾಸ್ಕ್ ತಾತ್ವಿಕ ಅಂತ್ಯಕಾಣದೆ ಕೊನೆಗೊಂಡಿತ್ತು. ಸ್ಪರ್ಧಿಗಳು ಕ್ರೀಡಾ ಸ್ಫೂರ್ತಿ ಪ್ರದರ್ಶಿಸದ ಕಾರಣ ಬಿಗ್ ಬಾಸ್, ಟಾಸ್ಕ್ ಅಂತ್ಯಗೊಳಿಸಿದ್ದರು. ಹೀಗಾಗಿ, ಟಾಸ್ಕ್ ಅಂತ್ಯಗೊಳ್ಳಲು ಕಾರಣರಾರು? ದುರ್ವರ್ತನೆ ತೋರಿದವರಾರು ಎಂಬುದನ್ನು ಪರಸ್ಪರ ಗುರುತಿಸಿ ಮಸಿ ಹಚ್ಚುವ ಕೆಲಸ ಕೊಟ್ಟಿದ್ದರು ಬಿಗ್ ಬಾಸ್.

ಇಲ್ಲಿ ಅವಾಚ್ಯ ಶಬ್ದ ಬಳಕೆ ಮತ್ತು ಕ್ರೀಡಾ ಸ್ಫೂರ್ತಿ ಇಲ್ಲದ ಕಾರಣ ನಟಿ ನಿಧಿ ಸುಬ್ಬಯ್ಯ, ಅವರದೇ ತಂಡದ ಕ್ಯಾಪ್ಟನ್ ಆಗಿದ್ದ ಪ್ರಶಾಂತ್ ಸಂಬರಗಿ ಸೇರಿ ಹಲವರಿಂದ ಮಸಿ ಹಚ್ಚಿಸಿಕೊಂಡರು.

ADVERTISEMENT

ನಿರ್ಮಲಾ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಬ್ರೋ ಗೌಡ ಸಹ ಮಸಿ ಹಚ್ಚಿಸಿಕೊಂಡರು.

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದ ರಾಜೀವ್: ಹಾಲಿ ಕ್ಯಾಪ್ಟನ್ ಬ್ರೋ ಗೌಡ ಅಲಿಯಾಸ್ ಶಮಂತ್ ಕ್ಯಾಪ್ಟನ್ಸಿ ಅವಧಿ ಮುಗಿದ ಕಾರಣ ಈ ವಾರಕ್ಕೆ ಹೊಸ ಕ್ಯಾಪ್ಟನ್ ಆಯ್ಕೆಗೆ ಬಿಗ್ ಬಾಸ್ ಮುಂದಾಗಿದ್ದರು. ಹಾಗಾಗಿ, ಸರ್ಕಲ್‌ನಲ್ಲಿ ಇಟ್ಟಿರುವ ಚೆಂಡುಗಳನ್ನು ಬಾಸ್ಕೆಟ್‌ಗೆ ಹಾಕುವ ಮತ್ತು ಯಾರಿಗೆ ಚೆಂಡು ಸಿಗುವುದಿಲ್ಲವೋ ಅವರು ಹೊರಹೋಗುವ ಟಾಸ್ಕ್ ನೀಡಿದ್ದರು. ಕ್ವಾರಂಟೈನ್ ಟಾಸ್ಕ್‌ನಲ್ಲಿ ಸರಿಯಾಗಿ ಆಡದೆ ಮಸಿ ಬಳಿಸಿಕೊಂಡ ಅರವಿಂದ್, ನಟಿ ನಿಧಿ ಸುಬ್ಬಯ್ಯ, ನಿರ್ಮಲಾ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಬ್ರೋ ಗೌಡ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡಲಾಗಿತ್ತು.

ಭಾರೀ ಪೈಪೋಟಿಯಿಂದ ಕೂಡಿದ್ದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕೊನೆವರೆಗೂ ರಾಜೀವ್, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಕೊನೆಯವರೆಗೂ ಗೆಲ್ಲುವ ಪ್ರಯತ್ನ ನಡೆಸಿದರು. ಆದರೆ, ಬಲಿಷ್ಠ ಸ್ಪರ್ಧಿ ರಾಜೀವ್ ಇವರಿಬ್ಬರನ್ನೂ ಸೋಲಿಸಿ ಚೆಂಡು ಬಾಸ್ಕೆಟ್‌ಗೆ ಹಾಕುವ ಮೂಲಕ ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು.

ಕ್ಯಾಪ್ಟನ್ ಆದ ಬಳಿಕ ಕ್ವಾರಂಟೈನ್ ಟಾಸ್ಕ್ ವೇಳೆ ಮನಸ್ತಾಪ ಮಾಡಿಕೊಂಡಿದ್ದ ನಿಧಿ–ಅರವಿಂದ್, ಬ್ರೋಗೌಡ–ಪ್ರಶಾಂತ್ ಮತ್ತಿತರನ್ನು ಕರೆದು ಹಗ್ ಮಾಡಿಸುವ ಮೂಲಕ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.