ADVERTISEMENT

BBK 11 | ಫ್ಯಾಮಿಲಿ ರೌಂಡ್‌: ಹೆತ್ತವರ ಕಂಡು ಕಣ್ಣೀರಾದ  ಸ್ಪರ್ಧಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2025, 11:12 IST
Last Updated 2 ಜನವರಿ 2025, 11:12 IST
   

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಫ್ಯಾಮಿಲಿ ರೌಂಡ್‌ ಆರಂಭವಾಗಿದೆ. ಸ್ಪರ್ಧಿಗಳ ಕುಟುಂಬ ಸದಸ್ಯರು ಬಿಗ್‌ ಬಾಸ್‌ ಮನೆಗೆ ಭೇಟಿ ನೀಡುತ್ತಿದ್ದಾರೆ.

ಈಗಾಗಲೇ ತ್ರಿವಿಕ್ರಮ್‌, ಭವ್ಯಾ, ರಜತ್‌, ಮಂಜು, ಗೌತಮಿ, ಮೋಕ್ಷಿತಾ ಅವರ ಕುಟುಂಬ ಬಿಗ್‌ಬಾಸ್‌ ಮನೆಗೆ ಭೇಟಿ ನೀಡಿದೆ. ಇಂದಿನ ಸಂಚಿಕೆಯಲ್ಲಿ (ಜ.2) ಧನರಾಜ್‌, ಚೈತ್ರಾ, ಹನಮಂತು ಸೇರಿ ಹಲವರ ಕುಟುಂಬ ಸದಸ್ಯರು ಭೇಟಿ ನೀಡಲಿದ್ದಾರೆ. 

ಎರಡು ತಿಂಗಳಿಗೂ ಹೆಚ್ಚು ಕಾಲ ಮನೆ, ಕುಟುಂಬದಿಂದ ದೂರವಿದ್ದ ಸದಸ್ಯರು ಹೆತ್ತವರನ್ನು ಕಂಡು ಕಣ್ಣೀರಾದರು. ಅಮ್ಮನ ಪ್ರೀತಿಯ ಅಪ್ಪುಗೆಯಲ್ಲಿ ಮಗುವಾಗಿ ಕೈತುತ್ತು ತಿಂದು, ಅಪ್ಪನ ಧೈರ್ಯದ ಮಾತುಗಳಿಗೆ ಕಿವಿಯಾದರು. ಮಡದಿ– ಮಕ್ಕಳನ್ನು ಕಂಡು ಹೆಮ್ಮೆಯಿಂದ ಬೀಗಿದರು. 

ADVERTISEMENT

ಗೌತಮಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಪತಿ ಅಭಿಷೇಕ್‌ರೊಂದಿಗೆ ಬಿಗ್‌ಬಾಸ್‌ ಮನೆಯಲ್ಲಿ ರೊಮ್ಯಾಂಟಿಕ್‌ ಆಗಿ ಆಚರಿಸಿಕೊಂಡರು.

ಸದಸ್ಯರ ಕುಟುಂಬದಿಂದ ಹೆಚ್ಚೆಂದರೆ 4 ಜನ ಬಂದರೆ, ಧನರಾಜ್‌ ಕುಟುಂಬದಿಂದ 10 ಕ್ಕೂ ಹೆಚ್ಚು ಜನ ಬಿಗ್‌ ಬಾಸ್ ಮನೆ ಪ್ರವೇಶಿಸಿ ಸಂಭ್ರಮ ಇಮ್ಮಡಿಗೊಳಿಸಿದ್ದಾರೆ.

ಇನ್ನೊಂದೆಡೆ, ಗಾಯಕ ಹನಮಂತು ಅವರ ಅಪ್ಪ– ಅಮ್ಮ ಉತ್ತರ ಕರ್ನಾಟಕ ಶೈಲಿಯ ಬುತ್ತಿ ಹೊತ್ತು ದೊಡ್ಮನೆ ಪ್ರವೇಶಿಸಿ ಮನೆಮಂದಿಗೆ ರೊಟ್ಟಿ ಊಟ ನೀಡಿದ್ದಾರೆ.

ಕುಟುಂಬ, ಸಂಬಂಧ, ನಿಷ್ಕಲ್ಮಶ ಪ್ರೀತಿಗೆ ಬಿಗ್‌ ಬಾಸ್‌ ಮನೆ ಈ ವಾರ ಸಾಕ್ಷಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.