ADVERTISEMENT

ಚಂದ್ರಪ್ರಭ ಗ್ಲಾಸ್‌ ಒಡೆದು ಹಾಕಿದ್ದೇಲ್ಲಾ ಡ್ರಾಮಾನಾ? ಸತ್ಯ ಹೇಳಿದ ಸತೀಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2025, 9:40 IST
Last Updated 13 ಅಕ್ಟೋಬರ್ 2025, 9:40 IST
<div class="paragraphs"><p>ಡಾಗ್ ಸತೀಶ್, ಚಂದ್ರಪ್ರಭ&nbsp;</p></div>

ಡಾಗ್ ಸತೀಶ್, ಚಂದ್ರಪ್ರಭ 

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಶುರುವಾಗಿ ಎರಡು ವಾರಗಳು ಕಳೆದಿವೆ. ಈ 2 ವಾರದಲ್ಲೇ ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ, ಕಿರುಚಾಟ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಮೂಡಿದೆ. ಕಳೆದ ಶುಕ್ರವಾರದಂದು ಬಿಗ್‌ಬಾಸ್‌ ಮನೆಯಲ್ಲಿ ಚಂದ್ರಪ್ರಭ ಹಾಗೂ ಡಾಗ್ ಸತೀಶ್‌ ಮಧ್ಯೆ ದೊಡ್ಡ ಗಲಾಟೆ ನಡೆದಿತ್ತು.

ADVERTISEMENT

ಡಾಗ್‌ ಸತೀಶ್‌ ಮೇಲೆ ಚಂದ್ರಪ್ರಭ ಏಕಾಏಕಿ ಸಿಟ್ಟಾಗಿದ್ದರು. ಅದೇ ಕೋಪದಲ್ಲಿ ಚಂದ್ರಪ್ರಭ ಬಿಗ್‌ಬಾಸ್‌ ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದರು. ಆದರೆ, ಈಗ ಬಿಡುಗಡೆಯಾದ ಪ್ರೊಮೋದಲ್ಲಿ ಸತೀಶ್‌, ‘ಹಿಂದಿನ ರಾತ್ರಿ ನಾವೆಲ್ಲಾ ಪ್ಲಾನ್ ಮಾಡಿ ಜಗಳ ಮಾಡಿದ್ದು, ಅದೆಲ್ಲಾ ಡ್ರಾಮಾ’ ಅಂತ ಹೇಳಿದ್ದಾರೆ.

ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಡಾಗ್‌ ಸತೀಶ್, ‘ಹಿಂದಿನ ರಾತ್ರಿ ನಾವಿಬ್ಬರು ಮಾತಾಡಿದ್ದೇವೆ. ಪ್ಲಾನ್‌ ಮಾಡಿಕೊಂಡು ಅದೆಲ್ಲಾ ಮಾಡಿದ್ದೇವೆ. ಅದೆಲ್ಲಾ ಡ್ರಾಮಾ’ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ಚಂದ್ರಪ್ರಭ ‘ಇಬ್ಬರು ಪ್ಲಾನ್‌ ಮಾಡಿಕೊಂಡು ಹಾಗೇ ಮಾಡಿದ್ದು ಅಂತ ಹೇಳಬೇಡ. ನೀನು ಕೊಟ್ಟಿರುವ ಕಾಟಕ್ಕೆ ಕಣ್ಣೀರು ಹಾಕಿದ್ದೇನೆ. ಎಲ್ಲರ ಮುಂದೆ ನನ್ನನ್ನು ಕೆಟ್ಟವನ ಹಾಗೇ ಮಾಡುತ್ತಿದ್ದೀರಿ’ ಎಂದು ಕೈಯಲ್ಲಿರುವ ಹಗ್ಗವನ್ನು ಬಿಚ್ಚಿ ಹೋಗಿದ್ದಾರೆ. ಇನ್ನು, ಚಂದ್ರಪ್ರಭ ಹಾಗೂ ಸತೀಶ್ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಇಡೀ ಮನೆಮಂದಿ ಅಚ್ಚರಿಗೊಂಡಿದ್ದಾರೆ.

ಅಂದು ಚಂದ್ರಪ್ರಭ ಹಾಗೂ ಸತೀಶ್‌ ಮಧ್ಯೆ ಏನಾಗಿತ್ತು?

ಸತೀಶ್‌ ಅಣ್ಣ ನಿಮ್ಮ ಕಾಲಿಗೆ ಬೀಳುತ್ತೀನಿ ಆಚೆ ಬಾರಣ್ಣ ನೀರು ಕುಡಿಬೇಕು ಅಂತ ಹೇಳಿದ್ದರು. ಆದರೆ, ಸುಮಾರು 2 ಗಂಟೆಗಳ ಕಾಲ ಕಾದು ಸುಸ್ತಾದ ಚಂದ್ರಪ್ರಭ ಏಕಾಏಕಿ ಆಕ್ರೋಶಗೊಂಡಿದ್ದರು ಅಲ್ಲದೇ ಕೈಯಲ್ಲಿದ್ದ ಹಗ್ಗವನ್ನು ಬಿಚ್ಚಿ ಆಚೆ ಬಂದಿದ್ದರು. ಈ ಬಗ್ಗೆ ಮನೆಮಂದಿ ಪ್ರಶ್ನಿಸಿದಾಗ ಚಂದ್ರಪ್ರಭ ಗಾಜಿನ ಲೋಟವನ್ನು ಒಡೆದು ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.