ಚಿತ್ರ:ಕಲರ್ಸ್ ಕನ್ನಡ/ಇನ್‌ಸ್ಟಾಗ್ರಾಮ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಶುರುವಾಗಿ ಎರಡು ವಾರ ಮುಕ್ತಾಯಗೊಂಡಿದೆ. ಒಂಟಿ ಹಾಗೂ ಜಂಟಿಗಳು ಎಂಬ ಪರಿಕಲ್ಪನೆಯೊಂದಿಗೆ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳು ಕಾಲಿಟ್ಟಿದ್ದರು.
ವೀಕ್ಷಕರಿಂದ ಶೇ.75ರಷ್ಟು ವೋಟ್ ಪಡೆದುಕೊಂಡು ಕೆಲವರು ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಬಂದಿದ್ದರು. ಇನ್ನು ಕೆಲವರು ಶೆ.75ಕ್ಕಿಂತ ಕಡಿಮೆ ವೋಟ್ ಪಡೆದು ಜಂಟಿಗಳಾಗಿ ಮನೆಗೆ ಆಗಮಿಸಿದ್ದರು. ಇದೀಗ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್ ಮನೆಗೆ ಜಂಟಿಗಳಾಗಿ ಬಂದಿದ್ದವರಿಗೆ ಕೊನೆಗೂ ಮುಕ್ತಿ ನೀಡಿದ್ದಾರೆ.
ಇಷ್ಟು ದಿನ ಎಲ್ಲಿಗೆ ಹೋದರು ಸ್ಪರ್ಧಿಗಳು ತಮ್ಮ ಜೋಡಿಯ ಜೊತೆಗೆ ಜಂಟಿಯಾಗಿಯೇ ಹೋಗಬೇಕಾಗಿತ್ತು. ಆದರೆ ಈಗ ಜಂಟಿಗಳ ಕೈಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸುವ ಮೂಲಕ ಬಿಗ್‌ಬಾಸ್ ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ನೀಡಿದ್ದಾರೆ. ಇದರಿಂದ ಯಾರಿಗೆ ಅನುಕೂಲವಾಗಲಿದೆ? ಯಾರಿಗೆ ಅನಾನುಕೂಲವಾಗಲಿದೆ? ಎಂದು ಮುಂದಿನ ಸಂಚಿಕೆಯವರೆಗೂ ಕಾದು ನೋಡಬೇಕಿದೆ.
ಇನ್ನು, ಬಿಗ್‌ಬಾಸ್ ಮನೆಗೆ ಒಟ್ಟು 19 ಸ್ಪರ್ಧಿಗಳು ಆಗಮಿಸಿದ್ದರು. ಮೊದಲ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರು. ಸದ್ಯ ಈಗ ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.