ಕಾಕ್ರೋಚ್ ಸುಧಿ, ಮಲ್ಲಮ್ಮ
ಚಿತ್ರ: ಜಿಯೋ ಹಾಟ್ ಸ್ಟಾರ್
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಬಾರಿಯ ಬಿಗ್‌ಬಾಸ್ ಮನೆಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಬಂದ ಮೊದಲ ದಿನವೇ ಬಿಗ್‌ಬಾಸ್ ಮನೆಯಿಂದ ರಕ್ಷಿತಾ ಶೆಟ್ಟಿ ಆಚೆ ಬಂದಿದ್ದರು. ಸದ್ಯ ಈಗ 18 ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಚಿತ್ರ: ಜಿಯೋ ಹಾಟ್ ಸ್ಟಾರ್
ಈ 18 ಸ್ಪರ್ಧಿಗಳ ಮಧ್ಯೆ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಪೈಪೋಟಿ ನಡೆಯುತ್ತಿದೆ. ಜಗಳ, ಕೂಗಾಟ, ಮಾತಿನ ಜಿದ್ದಾಜಿದ್ದಿ ನಡೆಯುತ್ತಿವೆ. ಆದರೆ ಇದರ ಮಧ್ಯೆ ಮನೆ ಮಂದಿಗೆ ಬಿಗ್‌ಬಾಸ್ ಶಾಕ್ ಒಂದನ್ನು ಕೊಟ್ಟಿದ್ದರು.
ಚಿತ್ರ: ಜಿಯೋ ಹಾಟ್ ಸ್ಟಾರ್
ಗುರುವಾರದ ಸಂಚಿಕೆಯಲ್ಲಿ ಬಿಗ್‌ಬಾಸ್ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಎಂದು ಘೋಷಿಸಿದ್ದರು. ಆ ಬೆನ್ನಲ್ಲೆ ಜಂಟಿ ತಂಡದವರು ಒಮ್ಮತದ ನಿರ್ಧಾರದಿಂದ ಮಲ್ಲಮ್ಮ ಅವರ ಹೆಸರನ್ನು ಫಿನಾಲೆ ಕಂಟೆಂಡರ್ ಎಂದು ಆಯ್ಕೆ ಮಾಡಿದ್ದರು. ಆದರೆ, ನಿನ್ನೆಯ ಎಪಿಸೋಡ್‌ನಲ್ಲಿ ಎಲ್ಲವು ಅದಲು ಬದಲಾಗಿ ಬಿಟ್ಟಿದೆ. ಫಿನಾಲೆ ಕಂಟೆಂಡರ್ ಪ್ರಕ್ರಿಯೆಯಲ್ಲಿ ಕಾಕ್ರೋಚ್ ಸುಧಿ, ಮಲ್ಲಮ್ಮ, ಚಂದ್ರಪ್ರಭ ಹಾಗೂ ಡಾಗ್ ಸತೀಶ್ ಇದ್ದರು.
ಈ ನಾಲ್ಕು ಮಂದಿಯ ಪರವಾಗಿ ಮನೆಯಲ್ಲಿ ಸ್ಪರ್ಧಿಗಳು ಟಾಸ್ಕ್ ಆಡಬೇಕಿತ್ತು. ಹೀಗೆ ಕಾಕ್ರೋಚ್ ಸುಧಿ ಪರವಾಗಿ ಮಾಳು ನಿಪನಾಳ ಟಾಸ್ಕ್‌ನಲ್ಲಿ ವಿಜೇತರಾದರು. ಹೀಗಾಗಿ ಕಾಕ್ರೋಚ್ ಸುಧಿ ಫಿನಾಲೆ ಮೊದಲ ಕಂಟೆಂಡರ್ ಆಗಿ ಹೊರ ಹೊಮ್ಮಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.