
ನಟ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಆರಂಭವಾಗಿ 27 ದಿನಗಳು ಕಳೆದಿವೆ. ಈ ನಡುವೆ ಬಿಗ್‌ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದು ಆಟ ಶುರು ಮಾಡಿದ್ದಾರೆ. ರಘು, ರಿಷಾ ಹಾಗೂ ಸೂರಜ್ ಬಂದು ವಾರ ಕಳೆದಿದೆ. ಈಗ ವಾರದ ಪಂಚಾಯಿತಿ ನಡೆಸೋದಕ್ಕೆ ಕಿಚ್ಚ ಸುದೀಪ್ ಸಜ್ಜಾಗಿ ಬಂದಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ‘ಒಂದು ಮಾತು ವ್ಯಕ್ತಿಗಳನ್ನು ಗೆಲ್ಲಿಸುತ್ತೆ, ಸ್ವಲ್ಪ ಎಡವಿದರೆ ಅದೇ ಮಾತು ವ್ಯಕ್ತಿತ್ವಗಳನ್ನು ಸೋಲಿಸುತ್ತೆ. ಜೋರಾದ ಮಾತು, ಮೆದುವಾದ ಮಾತು ಈ ಎಲ್ಲರದ ಮಧ್ಯೆ ಸರಿಯಾದ ಮಾತು. ಯಾರ ಮಾತು ಸರಿಯಾಗಿತ್ತು? ಯಾರ‍್ಯಾರ ಮಾತು ಸರಿಯಾಗಬೇಕಿತ್ತು’ ಎಂದು ಹೇಳಿದ್ದಾರೆ.
ಇಡೀ ವಾರದಲ್ಲಿ ಬಿಗ್‌ಬಾಸ್ ಮನೆಯಲ್ಲಿ ಏನೆಲ್ಲಾ ಸರಿಯಾಗಿತ್ತು, ಏನೆಲ್ಲಾ ತಪ್ಪಾಗಿತ್ತು ಎಂಬುವುದರ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಳ್ಳಲಿದ್ದಾರೆ. ಅಶ್ವಿನಿ ಗೌಡ–ಕಾವ್ಯ ನಡುವಿನ ಗಲಾಟೆ, ಕಾಕ್ರೋಜ್ ಸುಧಿ ರಕ್ಷಿತಾಗೆ ಅವಾಚ್ಯ ಶಬ್ದ ಬಳಸಿದ್ದು, ಅಶ್ವಿನಿ ಗೌಡ ಕಳಪೆ ಪಟ್ಟ ಸಿಕ್ಕಿರುವ ಬಗ್ಗೆ ಇಂದಿನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಮಾತಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.