ಕನ್ನಡದ ಬಿಗ್ ಬಾಸ್ 12ನೇ ಆವೃತ್ತಿ 7ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ಶನಿವಾರದಂದು ವಾರದ ಪಂಚಾಯಿತಿಯನ್ನು ಕಿಚ್ಚ ಸುದೀಪ್ ನಡೆಸಿಕೊಡುತ್ತಾರೆ.
ಈ ಬಾರಿಯ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಮೊದಲ ಕಿಚ್ಚನ ಚಪ್ಪಾಳೆ ಯಾರಿಗೆ ದೊರೆಯಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಹೌದು, ಈ ಬಾರಿಯ ಬಿಗ್ ಬಸ್ ಸೀಸನ್ 12ರ ಮೊದಲ ವಾರದ ಕಿಚ್ಚನ ಚಪ್ಪಾಳೆಯನ್ನು ಸುದೀಪ್ ಅವರು ಕನ್ನಡಿಗರಿಗೆ ಅರ್ಪಿಸಿದ್ದಾರೆ.
ಬಿಗ್ ಬಾಸ್ ಸೀಸನ್ 12 ಆರಂಭದ ಸಂದರ್ಭದಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಕನ್ನಡಿಗರ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗಡೆ ಒಂಟಿಯಾಗಿ ಹೋಗಬೇಕೋ ಅಥವಾ ಜಂಟಿಯಾಗಿ ಹೋಗಬೇಕೋ ಎಂದು ನಿರ್ಧಾರ ಮಾಡುವ ಅಧಿಕಾರ ಕನ್ನಡಿಗರಿಗೆ ಇತ್ತು. ಹೀಗಾಗಿ ಕನ್ನಡಿಗರ ನಿರ್ಧಾರಕ್ಕೆ ಮೆಚ್ಚಿದ ಕಿಚ್ಚ ಸುದೀಪ್ ಈ ಸೀಸನ್ 12ರ ಮೊದಲ ವಾರದ ಕಿಚ್ಚನ ಚಪ್ಪಾಳೆಯನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಸುಖಾ ಸುಮ್ಮನೆ ಯಾರಿಗೂ ಚೆಪ್ಪಾಳೆ ಕೊಡುವುದುದಿಲ್ಲ. ದೊಡ್ಮನೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಕಿಚ್ಚ ಚಪ್ಪಾಳೆ ಹೊಡೆಯುತ್ತಿದ್ದರು. ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸ್ಪರ್ಧಿಗಳು ಕಾಯುತ್ತಾ ಇರುತ್ತಾರೆ. ಆದರೆ ಈ ಬಿಗ್ ಬಾಸ್ 12ನೇ ಸೀಸನ್‌ನಲ್ಲಿ ಕಿಚ್ಚ ಸುದೀಪ್ ಅವರು ಕನ್ನಡ ಜನತೆಗೆ ತಮ್ಮ ಈ ವಾರದ ಮೊದಲ ಕಿಚ್ಚನ ಚಪ್ಪಾಳೆಯನ್ನು ಅರ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.