ಚಿತ್ರ: ಕಲರ್ಸ್ ಕನ್ನಡ
ಕನ್ನಡದ ಬಿಗ್‌ಬಾಸ್ ಸೀಸನ್ 12 ಶುರುವಾಗಿ 6 ದಿನಗಳು ಕಳೆದಿವೆ. ಇದೇ ಹೊತ್ತಲ್ಲಿ ಮನೆಮಂದಿ ಜೊತೆಗೆ ವಾರದ ಕತೆ ನಡೆಸಲು ಕಿಚ್ಚ ಸುದೀಪ್ ಆಗಮಿಸಿದ್ದಾರೆ. ಅದೇ ಕರ್ಲಿ ಹೇರ್ ಸ್ಟೈಲ್, ವೈಟ್ ಅಂಡ್ ವೈಟ್ ಡ್ರೆಸ್ ಧರಿಸಿ ವೇದಿಕೆಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.
ಚಿತ್ರ: ಕಲರ್ಸ್ ಕನ್ನಡ
ಬಿಗ್‌ಬಾಸ್ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಕಿಚ್ಚ ಸುದೀಪ್ ಮನೆಮಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ವೇದಿಕೆಗೆ ಬಂದ ಕಿಚ್ಚ ಸುದೀಪ್ ಅವರು ಮಾತಿನ ಮೂಲಕವೇ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಪ್ರೊಮೋದಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು?
‘ಅವತ್ತು ಜನ ಇಲ್ಲಿ 12 ಜನರನ್ನು ಒಂಟಿಗೆ ಲಾಯಕ್ಕಿಲ್ಲ ಅಂತ ಆಯ್ಕೆ ಮಾಡಿದ್ದಾರೆ. ಈ ವಾರ ಎಲ್ಲ ನೋಡಿದ ಮೇಲೆ ನನಗೆ ಅನಿಸಿದ್ದು, ಅವರ ತೀರ್ಪು ಎಷ್ಟು ಸರಿ ಇದೆ ಎಂದು ಗೊತ್ತಾಯ್ತು. ಈ ವಾರದ ಕಿಚ್ಚನ ಚಪ್ಪಾಳೆ ಅವತ್ತು ಇಲ್ಲಿ ಬಂದಿದ್ರಲ್ಲ ಅವರಿಗೆ’ ಎಂದರು.
‘ನಿಮ್ಮ ಆಟಗಳಲ್ಲಿ ಸ್ಟಾಟರ್ಜಿ ಇತ್ತಾ? ತಲೆ ಇತ್ತಾ? ಸುಮ್ಮನೆ ಒಂದು ಹಿಂಟ್ ಕೊಡ್ತಾ ಇದ್ದೀನಿ. ನಿಮ್ಮಲ್ಲಿ ಶೇ 50ರಷ್ಟು ರಿಪ್ಲೇಸ್ಮೆಂಟಿಂಗೂ ಒಂದು ಬ್ಯಾಚ್ ರೆಡಿ ಇರಬಹುದು. 11 ಸೀಸನ್ ಬೇರೆ, ಈ ಸೀಸನ್ ಬೇರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.