ರಕ್ಷಿತಾ ಶೆಟ್ಟಿ
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಿ ವಾಪಸ್ ಬಂದಿರುವ ರಕ್ಷಿತಾ ಶೆಟ್ಟಿ ಸಖತ್ ರೆಬೆಲ್ ಆಗಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿನವೇ ಒಂಟಿ ತಂಡದವರು ಆಚೆ ಕಳುಹಿಸಿದ್ದರು.
ಇದಾದ ಬಳಿಕ ಮತ್ತೆ ಒಂದು ವಾರದ ನಂತರ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಬಿಗ್‌ಬಾಸ್ ಮನೆಗೆ ಹೋದ ಮೇಲೆ ಎಲ್ಲರಿಗೂ ಪ್ರಶ್ನೆ ಮಾಡ್ತೀನಿ. ಸರಿಯಾಗಿ ಕಾರಣ ನೀಡದೆ ನನ್ನ ಆಚೆ ಹಾಕಿದ್ದಾರೆ. ನಾನು ಸ್ಥಳದಲ್ಲೇ ಅವರಿಗೆಲ್ಲಾ ಉತ್ತರ ಕೊಡುತ್ತೇನೆ ಅಂತ ಕಿಚ್ಚ ಸುದೀಪ್ ಮುಂದೆ ಹೇಳಿದ್ದರು.
ಇದೀಗ ಊಟದ ವಿಚಾರಕ್ಕೆ ರಕ್ಷಿತಾ ಶೆಟ್ಟಿ ದೊಡ್ಡ ಗಲಾಟೆ ಮಾಡಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು. ಆ ಪ್ರೊಮೋದಲ್ಲಿ ರಕ್ಷಿತಾ ಶೆಟ್ಟಿ ಎಲ್ಲರ ಮುಂದೆಯೇ ಕಾಕ್ರೋಚ್ ಸುಧಿಗೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ಕೆರಳಿದ್ದಾರೆ. ಅಷ್ಟೇ ಅಲ್ಲದೇ ಮಂಜು ಭಾಷಿಣಿ ಜೊತೆಗೂ ರಕ್ಷಿತಾ ಶೆಟ್ಟಿ ಜಗಳ ಮಾಡಿಕೊಂಡಿದ್ದಾರೆ. ಇದೇ ವೇಳೆ ಮಂಜು ಭಾಷಿಣಿ ಅವರು ಗ್ಯಾಸ್ ಮೇಲಿದ್ದ ಬಾಣಲೆಯನ್ನು ರಕ್ಷಿತಾ ಮೇಲೆ ಎಸೆಯೋದಕ್ಕೆ ಮುಂದಾಗಿದ್ದರು. ಇನ್ನು, ಗಲಾಟೆ ಬಳಿಕ ರಕ್ಷಿತಾ ಶೆಟ್ಟಿ ಕಣ್ಣೀರಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.