ADVERTISEMENT

ಬಿಗ್‌ಬಾಸ್‌ನಲ್ಲಿ ಹೊಸ ಟ್ವಿಸ್ಟ್: ಮತ್ತೆ ಮನೆಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2025, 11:06 IST
Last Updated 4 ಅಕ್ಟೋಬರ್ 2025, 11:06 IST
<div class="paragraphs"><p>ಕಿಚ್ಚ ಸುದೀಪ್, ರಕ್ಷಿತಾ ಶೆಟ್ಟಿ </p></div>

ಕಿಚ್ಚ ಸುದೀಪ್, ರಕ್ಷಿತಾ ಶೆಟ್ಟಿ

   

ಚಿತ್ರ: ಕಲರ್ಸ್ ಕನ್ನಡ

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಅಚ್ಚರಿ ಎಂಬಂತೆ ಮಂಗಳೂರಿನ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದರು. ಬಿಗ್‌ಬಾಸ್‌ ಮನೆಯಿಂದ ಆಚೆ ಹೋಗುವ ಮುನ್ನ ಕೊನೆಯದಾಗಿ ರಕ್ಷಿತಾ, ‘ನನಗೆ ಒಂದು ದಿನ ಇಲ್ಲಿಗೆ ಬರೋದಕ್ಕೆ ಅವಕಾಶ ಸಿಕ್ಕಿದೆ. ಎಲ್ಲರೂ ಇಲ್ಲಿಂದ ಹೋಗುತ್ತಾರೆ. ನಾನು ಮುಂಚಿತವಾಗಿ ಹೋಗುತ್ತಿದ್ದೇನೆ’ ಎಂದು ಆಚೆ ಬಂದಿದ್ದರು.

ADVERTISEMENT

ಆದರೆ ಇದೀಗ ರಕ್ಷಿತಾ ಶೆಟ್ಟಿ ಅಚ್ಚರಿ ಎಂಬಂತೆ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಫೋಟೊವನ್ನು ಹಂಚಿಕೊಂಡಿದೆ. ಆ ಫೋಟೊದಲ್ಲಿ ಕಿಚ್ಚ ಸುದೀಪ್‌ ಜೊ‌ತೆಗೆ ರಕ್ಷಿತಾ ವೇದಿಕೆ ಮೇಲೆ ನಿಂತುಕೊಂಡು ಮಾತನಾಡುತ್ತಿದ್ದಾರೆ.

ಕಲರ್ಸ್‌ ಕನ್ನಡ ಹಂಚಿಕೊಂಡ ಮತ್ತೊಂದು ಪ್ರೊಮೋದಲ್ಲಿ ಮಾತಾಡಿದ ರಕ್ಷಿತಾ, ‘ಸರ್‌ ನನಗೆ ಮನೆಯಿಂದ ಹೊರಗೆ ಹಾಕಿ ಬಿಟ್ಟಿದ್ದಾರೆ. ನಾನು ಮನೆಗೆ ಹೋದ ಮೇಲೆ ಸರಿಯಾದ ಕಾರಣ ಕೇಳುತ್ತೇನೆ. ಹೋಗುವಾಗ ಸಮಾಧಾನ ಮಾಡಿದ್ರು, ಆದರೆ ಯಾರು ಸ್ಟಾಂಡ್‌ ತೆಗೆದುಕೊಳ್ಳುವುದಕ್ಕೆ ಬಂದಿಲ್ಲ. ಅವರಿಗೆ ನಾನು ಹೇಗೆ ಆಗುತ್ತೇನೆ ಅಂತ ಗೊತ್ತಿಲ್ಲ. ಕೇವಲ ಕವರ್‌ ನೋಡಿ ಜಡ್ಜ್ ಮಾಡಿದ್ರು ಎಂದು’ ಕೋಪ ಮಾಡಿಕೊಂಡಿದ್ದಾರೆ. ಆಗ ಕಿಚ್ಚ ಸುದೀಪ್‌ ಅವರು ರಕ್ಷಿತಾಗೆ ಆಲ್ ದಿ ಬೆಸ್ಟ್ ಎಂದು ಬಿಗ್‌ಬಾಸ್‌ ಮನೆಗೆ ಕಳುಹಿಸಿದ್ದಾರೆ.

ಇನ್ನು, ಕಲರ್ಸ್‌ ಕನ್ನಡ ಹಂಚಿಕೊಂಡ ಆ ಪೋಸ್ಟ್ ಜೊತೆಗೆ ‘ಸುದೀಪ್ ಭೇಟಿ ಮಾಡಿದ ರಕ್ಷಿತಾ; ಇದು ರೀ-ಎಂಟ್ರಿ?’ ಎಂದು ಬರೆದುಕೊಂಡಿದ್ದಾರೆ. ಇದೇ ಪ್ರೊಮೋ ನೋಡಿದ ಬಿಗ್‌ಬಾಸ್‌ ವೀಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಬಿಗ್‌ಬಾಸ್‌ಗೆ ಬಂದ ರಕ್ಷಿತಾಗೆ ಸ್ವಾಗತ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಇಂದು ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿರುವ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಗೆ ರಕ್ಷಿತಾ ರೀ-ಎಂಟ್ರಿ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.