ನಟ ಸುದೀಪ್
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಮತ್ತೆ ಆರಂಭವಾಗುತ್ತಿದೆ. 12ನೇ ಆವೃತ್ತಿಯ ಬಿಗ್ ಬಾಸ್ ಸೆ.28ರಿಂದ ಆರಂಭವಾಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಶೋ ಪ್ರಸಾರವಾಗಲಿದೆ ಎಂದು ಸುದೀಪ್ ಘೋಷಿಸಿದ್ದಾರೆ
ಈ ಹಿಂದೆ ಕಾರ್ಯಕ್ರಮದ ನಿರೂಪಣೆಯಿಂದ ಹಿಂದೆ ಸರಿದಿದ್ದ ಸುದೀಪ್, ಮತ್ತೆ ಶೋ ನಡೆಸಿಕೊಡಲು ಒಪ್ಪಿಕೊಂಡ ಕಾರಣ ಈ ಆವೃತ್ತಿಯೂ ಸುದೀಪ್ ನಿರೂಪಣೆಯಲ್ಲೇ ನಡೆಯಲಿದೆ.
ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ, ಕಾರ್ಯಕ್ರಮದ ಸ್ವರೂಪ ಹೇಗಿರಲಿದೆ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
11ನೇ ಆವೃತ್ತಿಯಲ್ಲಿ ಕುರಿಗಾಹಿ, ಗಾಯಕ ಹನುಮಂತ ಗೆಲುವು ಸಾಧಿಸಿ, ₹50 ಲಕ್ಷ ಗೆದ್ದಿದ್ದರು. ತ್ರಿವಿಕ್ರಮ್ ರನ್ನರ್‌ಅಪ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.