ನಟ ಶರಣ್, ನಟಿ ಅದಿತಿ ಪ್ರಭುದೇವ
ಚಿತ್ರ ಕೃಪೆ: ಫೇಸ್‌ಬುಕ್ @Colors Kannada
ಬೆಂಗಳೂರು: ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿ 100ನೇ ವಾರಕ್ಕೆ ಕಾಲಿಟ್ಟಿದೆ. ಫಿನಾಲೆ ಟಿಕೆಟ್ ಪಡೆದುಕೊಳ್ಳಲು ಸ್ಪರ್ಧಿಗಳ ನಡುವೆ ಹಣಾಹಣಿ ಭಾರಿ ಜೋರಾಗಿದೆ. ಈ ನಡುವೆ ಬಿಗ್ ಬಾಸ್ ಮನೆಗೆ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಭೇಟಿ ನೀಡಿದ್ದಾರೆ.
ಇಂದು ಬಿಡುಗಡೆಯಾಗಿರುವ ಪ್ರೊಮೊದಲ್ಲಿ ನಟ ಶರಣ್ ಮತ್ತು ಅದಿತಿ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದು, ಫಿನಾಲೆಗೆ ನೇರವಾಗಿ ಆಯ್ಕೆಯಾಗುವ ಮನೆಯ ಒಬ್ಬ ಸ್ಪರ್ಧಿಗೆ ಟಿಕೆಟ್ ನೀಡಲಿದ್ದಾರೆ.
ಅವರ ಭೇಟಿ ನಂತರ ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದು, ಆ ಟಾಸ್ಕ್‌ನಲ್ಲಿ ವಿಜೇತರಾದವರಿಗೆ ಫಿನಾಲೆ ಟಿಕೆಟ್ ದೊರೆಯಲಿದೆ. ಮನೆಯ ಸ್ಪರ್ಧಿಗಳಾದ ತ್ರಿವಿಕ್ರಮ್, ರಜತ್, ಹನುಮಂತ ಮತ್ತು ಭವ್ಯ ಬಿಗ್ ಬಾಸ್ ನೀಡಿರುವ ಟಾಸ್ಕ್‌ನಲ್ಲಿ ಆಟವಾಡಿದ್ದಾರೆ.
ಟಾಸ್ಕ್ ಪೂರ್ಣಗೊಳಿಸಿ ನೇರವಾಗಿ ಫಿನಾಲೆ ತಲುಪುವ ಅದೃಷ್ಟಶಾಲಿ ಸ್ಪರ್ಧಿ ಯಾರಾಗ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.