ADVERTISEMENT

BBK12: ಮನೆಯಲ್ಲಿ ಶುರುವಾಯ್ತು ಜಡೆ ಜಗಳ: ಅಶ್ವಿನಿಯರ ಮಾತಿಗೆ ಮನೆಮಂದಿ ಗಪ್‌ಚುಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2025, 5:17 IST
Last Updated 7 ಅಕ್ಟೋಬರ್ 2025, 5:17 IST
<div class="paragraphs"><p>ಅಶ್ವಿನಿ ಎಸ್.ಎನ್ ಮತ್ತು&nbsp;ಅಶ್ವಿನಿ ಗೌಡ</p></div>

ಅಶ್ವಿನಿ ಎಸ್.ಎನ್ ಮತ್ತು ಅಶ್ವಿನಿ ಗೌಡ

   

ಚಿತ್ರ: ಕಲರ್ಸ್‌ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ ಮನೆ ಈಗ ರಣರಂಗವಾಗಿದೆ. ದಿನೇ ದಿನೇ ಬಿಗ್‌ಬಾಸ್‌ ಮನೆಯಲ್ಲಿ ಗುದ್ದಾಟ, ಗಲಾಟೆಯ ಸದ್ದು ಜೋರಾಗಿ ಕೇಳಿಸುತ್ತಿದೆ. ಎರಡನೇ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ ಆರಂಭವಾಗಿದೆ.

ADVERTISEMENT

ಚಿತ್ರ: ಕಲರ್ಸ್‌ ಕನ್ನಡ ಇನ್‌ಸ್ಟಾಗ್ರಾಮ್

ಹೌದು, ಬಿಗ್​​ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಕಳೆದ ಮೂರು ದಿನಗಳಿಂದಲೂ ಬಿಗ್​​ಬಾಸ್ ಮನೆಯಲ್ಲಿ ಗಲಾಟೆ ಸದ್ದು ಜೋರಾಗಿ ಕೇಳಿಸುತ್ತಿದೆ. ಟಾಸ್ಕ್‌ಗಳನ್ನು ಆಡುವ ಭರದಲ್ಲಿ ಸ್ಪರ್ಧಿಗಳು ಜೋರು ಧ್ವನಿಯಲ್ಲಿ ಗಲಾಟೆ ಶುರು ಮಾಡಿದ್ದಾರೆ.

ಇನ್ನು, ಇಷ್ಟು ದಿನ ಗಿಲ್ಲಿ ಹಾಗೂ ಕಾವ್ಯ ಜೊತೆಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ಅಶ್ವಿನಿ ಗೌಡ ಈಗ ಅಶ್ವಿನಿ ಎಸ್.ಎನ್ ಮೇಲೆ ಕೆಂಡ ಕಾರಿದ್ದಾರೆ. ಟಾಸ್ಕ್ ವಿಷಯದಲ್ಲಿ ಅಶ್ವಿನಿ ಗೌಡ ಹಾಗೂ ಅಶ್ವಿನಿ ನಡುವೆ ಜೋರು ಜಗಳ ನಡೆದಿದೆ.

ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೊಮೋದಲ್ಲಿ, ಅಶ್ವಿನಿ ಗೌಡ ಹಾಗೂ ಅಶ್ವಿನಿ ಎಸ್.ಎನ್ ಮಧ್ಯೆ ಮಾತಿನ ಸಮರ ನಡೆದಿದೆ. ಈ ಇಬ್ಬರ ಗಲಾಟೆಯನ್ನು ನೋಡಿದ ಮನೆಮಂದಿ ಮೂಕವಿಸ್ಮಿತರಾಗಿ ನೋಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.