ADVERTISEMENT

ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 11:08 IST
Last Updated 10 ಜನವರಿ 2026, 11:08 IST
<div class="paragraphs"><p>ಧ್ರುವಂತ್‌,&nbsp;ಕಿಚ್ಚ ಸುದೀಪ್, ಅಶ್ವಿನಿ ಗೌಡ</p></div>

ಧ್ರುವಂತ್‌, ಕಿಚ್ಚ ಸುದೀಪ್, ಅಶ್ವಿನಿ ಗೌಡ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ 104ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೇನು ಬಿಗ್‌ಬಾಸ್‌ ಫಿನಾಲೆಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ವಾರದ ಪಂಜಾಯಿತಿ ನಡೆಸಲು ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ಜೊತೆಗೆ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಅಶ್ವಿನಿ ಗೌಡ ಹಾಗೂ ಧ್ರುವಂತ್‌ಗೆ ಸುದೀಪ್ ಅವರು ಅಚ್ಚರಿ ಮೂಡಿಸಿದ್ದಾರೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪ್ರೋಮೊ ಒಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ವೇದಿಕೆಗೆ ಬಂದ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್‌ ಸೀಸನ್ 12ರ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಸುದೀಪ್ ಅವರು ಘೋಷಿಸಿದ್ದಾರೆ.

ಸದ್ಯ ಬಿಗ್‌ಬಾಸ್‌ ಮನೆಯಲ್ಲಿ 8 ಮಂದಿ ಉಳಿದುಕೊಂಡಿದ್ದಾರೆ. ಅಶ್ವಿನಿ ಗೌಡ, ರಘು, ಕಾವ್ಯ, ಗಿಲ್ಲಿ, ಧ್ರುವಂತ್, ರಕ್ಷಿತಾ, ರಾಶಿಕಾ ಹಾಗೂ ಧನುಷ್ ಇದ್ದಾರೆ. ಈ 8 ಮಂದಿಗಳ ಪೈಕಿ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಧ್ರುವಂತ್‌ಗೆ ತಮ್ಮ ಕಿಚ್ಚನ ಚಪ್ಪಾಳೆ ನೀಡಿದ್ದಾರೆ.

ಮನೆಯಲ್ಲಿ ಆರು ಜನರ ಗುಂಪು ಪ್ರತಿ ಬಾರಿಯೂ ತಮ್ಮನ್ನು ಕೆಳಗಿಟ್ಟು ಮಾತನಾಡುತ್ತಿದ್ದರು ಮತ್ತು ಹೀಯಾಳಿಸುತ್ತಿದ್ದರು ಎಂಬ ಅಶ್ವಿನಿ ಗೌಡ ಆರೋಪಿಸಿದರು. ಬಳಿಕ ‘ಅವರ ಗುಂಪಿನಲ್ಲಿ ಸೇರಿ ಅವಮಾನಿಸಿಕೊಳ್ಳುವುದಕ್ಕಿಂತ ದೂರ ಉಳಿದು ನನ್ನ ವ್ಯಕ್ತಿತ್ವ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು ಎಂದಿದ್ದಾರೆ. ಜೊತೆಗೆ ಮಾತಡಿದ ಧ್ರುವಂತ್, ‘ನನ್ನ ಆಟವೇನು ಎಂಬುದು ನನಗೆ ಗೊತ್ತು, ಈ ಮನೆಗೆ ನನ್ನಿಂದ ಏನು ಕೊಡಬೇಕೋ ಅದನ್ನು ಕೊಡುತ್ತಿದ್ದೇನೆ. ಅವರ ಹಂಗು ನಮಗೆ ಬೇಕಿಲ್ಲ’ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಇಡೀ ವಾರದ ಟಾಸ್ಕ್‌ಗಳನ್ನು ವೀಕ್ಷಿಸಿದ ಸುದೀಪ್‌, ‘ನನಗೆ ಈ ವಾರ ಕಂಡಿದ್ದು ಒಬ್ಬ ವ್ಯಕ್ತಿಯ ಹಠ ಮತ್ತು ಗುರಿ. ಎಲ್ಲಿ ಅವಮಾನಗಳಾಗುತ್ತವೆಯೋ ಅಲ್ಲಿಯೇ ಹೋರಾಡಿ, ಯಾವ ಬಾಯಿಗಳು ನಿಮ್ಮನ್ನು ತೆಗಳಿದ್ದವೋ ಅದೇ ಬಾಯಿಗಳಿಂದ ಹೊಗಳಿಸಿಕೊಳ್ಳುವುದೇ ನಿಜವಾದ ಗೆಲುವು’ ಎಂದು ಹೇಳುತ್ತಾ ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರ ಆಟಕ್ಕೆ ಚಪ್ಪಾಳೆ ತಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.