
ಗಿಲ್ಲಿ ನಟ, ಅಶ್ವಿನಿ ಗೌಡ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ ಜೋರು ಗಲಾಟೆ ನಡೆದಿದೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಬಿಗ್‌ಬಾಸ್ ಕೊಟ್ಟ ಟಾಸ್ಕ್ ಒಂದಕ್ಕೆ ಉಸ್ತುವಾರಿ ಆಗಿರುತ್ತಾರೆ. ಇದೇ ಟಾಸ್ಕ್ ವೇಳೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆಗೆ ಕಾರಣವಾಗಿದೆ.
ಪ್ರೊಮೋದಲ್ಲಿ ಏನಿದೆ?
ಮನೆಮಂದಿಯನ್ನು ಎರಡು ಗುಂಪುಗಳನ್ನಾಗಿ ಮಾಡಿ ಬಿಗ್‌ಬಾಸ್ ಟಾಸ್ಕ್ ಒಂದನ್ನು ಕೊಟ್ಟಿರುತ್ತಾರೆ. ಡ್ರಮ್ ಭಾರವನ್ನು ಹೆಚ್ಚಿಸುತ್ತಾ ಅದನ್ನು ಹೊತ್ತು ನಿಂತಿರುವ ಸದಸ್ಯರು ಡ್ರಮ್ ಅನ್ನು ನೆಲಕ್ಕೆ ಇಳಿಸುವಂತೆ ಮಾಡಬೇಕಿತ್ತು. ಇದೇ ವೇಳೆ ಅಭಿಷೇಕ್ ಆಟದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಉಸ್ತುವಾರಿ ಸ್ಥಾನದಲ್ಲಿದ್ದ ಗಿಲ್ಲಿ ಆಟವನ್ನು ನಿಲ್ಲಿಸಲು ಮುಂದಾಗಿದ್ದಾರೆ. ಆಗ ಅಶ್ವಿನಿ ಗೌಡ ಮಧ್ಯ ಪ್ರವೇಶಿಸಿ ಗಿಲ್ಲಿ ಜೊತೆಗೆ ಗಲಾಟೆ ಮಾಡಿದ್ದಾರೆ. ಮಾತನಾಡುವ ಭರದಲ್ಲಿ ಅಶ್ವಿನಿ ಗೌಡ ಅವರು ಗಿಲ್ಲಿಗೆ ನನ್ನ ಹತ್ತಿರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು ಎಂದು ಗರಂ ಆಗಿದ್ದಾರೆ.
ಬಿಗ್‌ಬಾಸ್ ಶುರುವಾದ ಮೊದಲಿನಿಂದಲೂ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಗಲಾಟೆ ಆಗುತ್ತಲೇ ಇತ್ತು. ಆದರೆ ಈ ಬಾರಿ ಉಸ್ತುವಾರಿ ಸ್ಥಾನದಲ್ಲಿದ್ದ ಅಶ್ವಿನಿ ಗೌಡ ಹಾಗೂ ಗಿಲ್ಲಿ ಗಲಾಟೆ ಮಾಡಿಕೊಂಡಿದ್ದು, ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುವ ಮೂಲಕ ವೀಕ್ಷಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.