
ಜಾಹ್ನವಿ, ಅಶ್ವಿನಿ ಗೌಡ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಈ ವಾರ ಯಾವುದೇ ಟಾಸ್ಕ್ ನೀಡಿಲ್ಲ. ಬದಲಾಗಿ ಎಲ್ಲಾ ಸ್ಪರ್ಧಿಗಳನ್ನು ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಈ ನಡುವೆ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರು ಮಗ ಬರೆದ ಪತ್ರವನ್ನು ಓದುವ ತವಕದಲ್ಲಿದ್ದಾರೆ.
ಬಿಗ್‌ಬಾಸ್ ನಾಮಿನೇಷನ್‌ನಿಂದ ಪಾರಾಗಲು ಸ್ಪರ್ಧಿಗಳಿಗೆ ವಿಶೇಷ ಅವಕಾಶದ ಜೊತೆಗೆ ಟ್ವಿಸ್ಟ್ ಕೊಟ್ಟಿದ್ದರು. ಅದುವೆ ಮನೆಯಿಂದ ಬಂದ ಪತ್ರವನ್ನು ಓದುವುದು.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಅವರಿಗೆ ಮನೆಯಿಂದ ಬಂದ ಪತ್ರವನ್ನು ಅವರ ಮುಂದೆ ಇಟ್ಟಿದ್ದಾರೆ. ಒಬ್ಬರು ಪತ್ರವನ್ನು ತ್ಯಾಗ ಮಾಡಬೇಕು. ಅದರಿಂದ ಮತ್ತೊಬ್ಬ ಸ್ಪರ್ಧಿ ನಾಮಿನೇಷನ್‌ನಿಂದ ಬಚಾವ್ ಆಗುತ್ತಾರೆ. ಜೊತೆಗೆ ಮನೆಯಿಂದ ಬಂದ ಪತ್ರವನ್ನು ಓದುವ ಅವಕಾಶ ಪಡೆಯುತ್ತಾರೆ.
ಅದರಂತೆ ಪ್ರೊಮೋದಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಮನೆಯಿಂದ ಬಂದ ಪತ್ರವನ್ನು ಓದುವ ತವಕದಲ್ಲಿದ್ದಾರೆ. ಎಲ್ಲಿ ಮನೆಯಿಂದ ಬಂದ ಪತ್ರ ತಪ್ಪಿ ಹೋಗುತ್ತದೆಯೋ ಎಂದು ಕಣ್ಣೀರಿಟ್ಟಿರುವುದನ್ನು ಕಾಣಬಹುದು. ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಇಬ್ಬರಲ್ಲಿ ಯಾರ ಕೈಗೆ ಮಗ ಬರೆದ ಪ್ರೀತಿಯ ಪತ್ರ ಸೇರಲಿದೆ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.