ADVERTISEMENT

ಬಿಗ್‌ಬಾಸ್‌ ಮನೆಯ ಅಸುರ ಬಕಾಸುರನಿಗೆ ಬರೀ ಊಟದ್ದೇ ಚಿಂತೆ: ಅಶ್ವಿನಿ ಕೆಂಡಮಂಡಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 12:40 IST
Last Updated 10 ಅಕ್ಟೋಬರ್ 2025, 12:40 IST
<div class="paragraphs"><p>ಕಾಕ್ರೋಚ್ ಸುಧಿ, ಅಶ್ವಿನಿ ಗೌಡ</p></div>

ಕಾಕ್ರೋಚ್ ಸುಧಿ, ಅಶ್ವಿನಿ ಗೌಡ

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ ಮನೆಯಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳೋದು ಬಲು ಕಷ್ಟ. ಇಂದು ಚೆನ್ನಾಗಿ ಊಟ ಮಾಡಿಕೊಂಡಿದ್ದ ಸ್ಪರ್ಧಿಗಳಿಗೆ ನಾಳೆ ಉಪವಾಸ ಇರುವ ಪರಿಸ್ಥಿತಿ ಬರಬಹುದು. ಆದರೆ ಬಿಗ್‌ಬಾಸ್‌ ಮನೆಗೆ ಬರುವ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ನಿಯಮವನ್ನು ಪಾಲಿಸಬೇಕಾಗುತ್ತದೆ.

ADVERTISEMENT

ಹೀಗೆ ಬಿಗ್‌ಬಾಸ್‌ ಮನೆಯ ಅಸುರಾಧಿಪತಿ ಆಗಿರುವ ಕಾಕ್ರೋಚ್ ಸುಧಿಗೆ ಅಶ್ವಿನಿ ಗೌಡ ಹೊಸ ಹೆಸರು ಇಟ್ಟಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರೊಮೋದಲ್ಲಿ, ಅಶ್ವಿನಿ ಅವರು ಬೆಳಗಿನ ತಿಂಡಿಯನ್ನು ತಯಾರಿಸದೇ ಜಂಟಿಗಳ ವಿರುದ್ಧ ಸಮರ ಸಾರುತ್ತಿದ್ದರು.

ಆಗ ಬಂದ ಕಾಕ್ರೋಚ್ ಸುಧಿ, ಮಲ್ಲಮ್ಮ ಅವರೆಲ್ಲಾ ವಯಸ್ಸಾಗಿರುವವರು ಇದ್ದಾರೆ. ಹೊಟ್ಟೆ ಹಸಿವಿನಿಂದ ತಲೆ ಕೆಟ್ಟು ಹೋಗುತ್ತದೆ ನನಗೆ. ಮೀಟಿಂಗ್ ಆಯ್ತು, ಈಟಿಂಗ್ ಬಗ್ಗೆ ಏನೂ ಚಿಂತೆ ಇಲ್ಲ ‌ಎಂದಿದ್ದಾರೆ. ಆಗ ಮಾತನಾಡಿದ ಅಶ್ವಿನಿ, ನೀವು ಬಿಗ್‌ಬಾಸ್‌ ಮನೆಗೆ ಬಂದಿರೋದೆ ಬರೀ ತಿನ್ನೋದಕ್ಕೆ ಅಲ್ವಾ ಅಸುರ ಬಕಾಸುರ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.