
ಅಭಿಷೇಕ್, ಧನುಷ್
ಚಿತ್ರ: ಜಿಯೋ ಹಾಟ್‌ಸ್ಟಾರ್
ಆರನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್ಗಳು ಇರುವುದಿಲ್ಲ ಎಂದು ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದರು. ಅಲ್ಲದೆ ಈ ವಾರ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ಸದ್ಯ, ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಮನೆಯಿಂದ ಪತ್ರಗಳು ಬಂದಿದ್ದು, ಅದನ್ನು ಪಡೆಯಲು ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ.
ಮನೆಯಿಂದ ಬಂದಿರುವ ವಿಶೇಷ ಪತ್ರ ಓದುವ ತವಕದಲ್ಲಿ ಕ್ಯಾಪ್ಟನ್ ಧನುಷ್ ತಪ್ಪು ಮಾಡಿಬಿಟ್ರಾ ಎಂಬ ಅನುಮಾನ ಮೂಡಿದೆ. 6ನೇ ವಾರದ ಮೊದಲ ದಿನ ‘ಬಿಗ್‌ಬಾಸ್ ಮನೆಯಲ್ಲಿರಲು ಯಾವ ಸ್ಪರ್ಧಿ ಅರ್ಹರಲ್ಲ’ ಎಂಬ ಚಟುವಟಿಕೆ ನೀಡಲಾಗಿತ್ತು. ಈಗ ಬಿಗ್‌ಬಾಸ್ ಸ್ಪರ್ಧಿಗಳಿಗೆ ತಮ್ಮ ಮನೆಯವರು ಕಳುಹಿಸಿದ ಪತ್ರವನ್ನು ಓದುವ ಅವಕಾಶವನ್ನು ನೀಡಿದ್ದಾರೆ.
ಜಿಯೋ ಹಾಟ್‌ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್ ‘ಈ ಮನೆಯಲ್ಲಿ ಉಳಿಯಲು ನಿಮ್ಮ ಕುಟುಂಬದವರ ಸಹಾಯ ಪಡೆಯುವ ಸಮಯ. ಧನುಷ್ ನೀವು ಅಭಿಷೇಕ್ ಅವರಿಗೆ ಬಂದಿರುವ ಪತ್ರವನ್ನು ನೀವು ನೀಡಬಹುದು. ಅಥವಾ ನಿಮ್ಮ ಕುಟುಂಬದವರಿಂದ ಬಂದ ಪತ್ರವನ್ನು ಬಾಟಲ್ ಸಮೇತ ನೀರಿಗೆ ಹಾಕಬಹುದು. ಪತ್ರ ಪಡೆದವರು ಇಮ್ಯೂನಿಟಿ ಪಡೆಯುತ್ತಾರೆ. ಪತ್ರ ಕಳೆದುಕೊಂಡವರು ನಾಮಿನೇಟ್ ಆಗಿಯೇ ಉಳಿಯುತ್ತಾರೆ’ ಎಂದಿದ್ದಾರೆ.
ಇದೀಗ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದ ಸಹಾಯದಿಂದ ನಾಮಿನೇಟ್‌ನಿಂದ ತಪ್ಪಿಸಿಕೊಳ್ಳುವ ಅವಕಾಶವನ್ನು ಬಿಗ್‌ಬಾಸ್ ನೀಡಿದ್ದಾರೆ. ಕುಟುಂಬದಿಂದ ಬಂದಿರುವ ಪತ್ರ ಪಡೆದುಕೊಳ್ಳುವ ಸ್ಪರ್ಧಿ ಈ ವಾರ ಸೇಫ್ ಆಗುತ್ತಾರೆ. ಹೀಗೆ ಪ್ರೊಮೋದಲ್ಲಿ ಧನುಷ್ ಅವರು ಅಭಿಷೇಕ್ ಅವರಿಗೆ ಬಂದಿರುವ ಪತ್ರವನ್ನು ನೀರಿನಲ್ಲಿ ಹಾಕಿದ್ದಾರೆ ಎಂದು ಕಾಣಿಸಿದೆ. ಸ್ನೇಹಿತರಾದ ಅಭಿಷೇಕ್ ಮತ್ತು ಧನುಷ್ ಈ ಇಬ್ಬರ ಮಧ್ಯೆ ಕುಟುಂಬಸ್ಥರಿಂದ ಬಂದಿರುವ ಪತ್ರ ಯಾರ ಕೈಗೆ ಸೇರಲಿದೆ ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.