
ರಜತ್ ಕಿಶನ್, ಕಿಚ್ಚ ಸುದೀಪ್, ಧ್ರುವಂತ್
ಚಿತ್ರ: ಇನ್‌ಸ್ಟಾಗ್ರಾಮ್
ವಾರದ ಪಂಚಾಯಿತಿ ನಡೆಸಲು ಬಿಗ್‌ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಬಂದಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್ ಮುಂದೆಯೇ ಧ್ರುವಂತ್ ಹಾಗೂ ರಜತ್ ಕಿಶನ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ.
ಬಿಗ್‌ಬಾಸ್ ಮನೆಗೆ ಪೋಸ್ಟ್ ಬಾಕ್ಸ್ ಬಂದಿದೆ. ಅದರಲ್ಲಿ ವೀಕ್ಷಕರು ಸ್ಪರ್ಧಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರೊಮೋದಲ್ಲಿ ಮೊದಲು ಪತ್ರ ಧ್ರುವಂತ್ ಅವರಿಗೆ ಬಂದಿದೆ. ‘ಮನೆ ಬಿಟ್ಟು ಹೋಗುವಂಥದ್ದು ಏನಾಯ್ತು’ ಎಂದು ವೀಕ್ಷಕರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್ ಉತ್ತರ ಹೀಗಿತ್ತು.
‘ನಿರಂತರವಾಗಿ ಕೆಲವೊಂದಿಷ್ಟು ಆರೋಪಗಳನ್ನು ಮಾಡಲಾಯ್ತು, ಅದರಲ್ಲಿರುವ ಡ್ಯಾಮೇಜ್ ನನಗೆ ಬೇಕಾ?’ ಎಂದು ಧ್ರುವಂತ್ ಅವರು ಹೇಳಿದ್ದಾರೆ. ಆಗ ರಜತ್ ಅವರು, ‘ಧ್ರುವಂತ್ ಅವರೇ ಡ್ಯಾಮೇಜ್ ಮಾಡಿಕೊಳ್ಳುತ್ತಿದ್ದಾರೆ. ಅಸಭ್ಯವಾಗಿ ಮಾತನಾಡೋದು, ಅಸಭ್ಯವಾಗಿ ವರ್ತಿಸೋದು ಮಾಡುತ್ತಿದ್ದಾನೆ’ ಎಂದಿದ್ದಾರೆ. ಆಗ ಕೂಡಲೇ ಕೋಪಗೊಂಡ ಧ್ರುವಂತ್ ‘ಇದು ತಪ್ಪು ಹೇಳಿಕೆ’ ಸರ್ ಎಂದಿದ್ದಾರೆ. ಆಗ ರಜತ್, ‘ನಾನು ಮಾತನಾಡುವಾಗ ತಡೆದುಕೋ’ ಎಂದಿದ್ದಾರೆ. ಆಗ ಧ್ರುವಂತ್, ‘ನೀನು ಇದನ್ನೆಲ್ಲ ನನ್ನ ಹತ್ರ ಮಾತಾಡಬೇಡ. ಎಷ್ಟರಲ್ಲಿ ಇರಬೇಕೋ ಅಷ್ಟು ಇರು’ ಎಂದು ಕಿಚ್ಚ ಸುದೀಪ್ ಮುಂದೆಯೇ ಗಲಾಟೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.