ADVERTISEMENT

ಬಿಗ್‌ಬಾಸ್‌ನಲ್ಲಿ ರಕ್ಷಿತಾಳದ್ದು ಬರೀ ನಾಟಕ, ನಾನು ಕೂಡ ಮಂಗಳೂರಿನವನು: ಧ್ರುವಂತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 9:36 IST
Last Updated 10 ನವೆಂಬರ್ 2025, 9:36 IST
<div class="paragraphs"><p>ಧ್ರುವಂತ್,&nbsp;ರಕ್ಷಿತಾ</p></div>

ಧ್ರುವಂತ್, ರಕ್ಷಿತಾ

   

ಚಿತ್ರ: ಇನ್‌ಸ್ಟಾಗ್ರಾಮ್

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾಳದ್ದು ಬರೀ ನಾಟಕ, ನಾನು ಕೂಡ ಮಂಗಳೂರಿನವನು ಆದರೆ ಅವರ ತರ ಯಾರೂ ಮಾತಾಡಲ್ಲ ಎಂದು ಧ್ರುವಂತ್‌ ಎಲ್ಲರ ಮುಂದೆ ಕಿಡಿಕಾರಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್‌ ಮನೆಯಲ್ಲಿ ಧ್ರುವಂತ್‌ ಅವರು ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಮೇಲೆ ಕೆಂಡ ಕಾರುತ್ತಿದ್ದರು.

ADVERTISEMENT

ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಧ್ರುವಂತ್ ಮನೆಮಂದಿ ಮುಂದೆ ರಕ್ಷಿತಾ ಹಾಗೂ ಗಿಲ್ಲಿ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ಗಳನ್ನು ಕೊಟ್ಟಿದ್ದಾರೆ. ಆ ಟಾಸ್ಕ್‌ನಲ್ಲಿ ಗಿಲ್ಲಿ ನಟ, ರಕ್ಷಿತಾ ವಿರುದ್ಧವಾಗಿ ಧ್ರುವಂತ್‌ ಮಾತನಾಡಿದ್ದಾರೆ.

‌ಬನಿಯನ್‌ ಹಾಕಿಕೊಂಡು, ತಾನು ಬಡವನಾಗಿ ಮುಖವಾಡ ಹಾಕ್ಕೊಂಡು ಬಡವನಂತೆ ನಟಿಸುತ್ತಿದ್ದಾರೆ. ಅಣ್ಣ ಹತ್ತಿರ ನೂರು ಕುರಿ ಇದೆ ಎನ್ನುತ್ತಾರೆ. ಬಟ್ಟೆ ಹಾಕದೆ, ವಾಶ್‌ ಮಾಡದೆ ಕೆರದುಕೊಂಡು ಇರುತ್ತಾರೆ. ನೀವು ಸಿರಿವಂತರು ಎಂದು ಹೇಳಿ ಏನು ಬಿಂಬಿಸಲು ಹೊರಟಿದ್ದೀರಾ? ಎಂದು ಗಿಲ್ಲಿ ನಟನ ವಿರುದ್ಧ ಧ್ರುವಂತ್‌ ಹೇಳಿದ್ದಾರೆ.

ಬಳಿಕ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡಿದ ಧ್ರುವಂತ್‌, ನಾನು ಕೂಡ ಮಂಗಳೂರಿನವನು. ಎಂಥ ಗೊತ್ತುಂಟ ಗಾಯ್ಸ್‌ ಎಂದು ನಾಟಕ ಆಡಲ್ಲ. ಶನಿವಾರ ಮಾತ್ರ ಕನ್ನಡ ಬರಲ್ಲ. ಆದರೆ ಜಗಳ ಆಡುವಾಗ ಅವರಿಗೆ ಯಾವುದೇ ಭಾಷೆ ಸಮಸ್ಯೆ ಆಗಲ್ಲ. ಇದು ನಾಟಕ, ರಕ್ಷಿತಾ ಮುಖವಾಡ ಹಾಕಿಕೊಂಡಿದ್ದಾಳೆ ಎಂದು ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.