ADVERTISEMENT

BBK12: ಬಿಗ್‌ಬಾಸ್‌ ಮನೆಗೆ ಬಂದ ಮಾಜಿ ಸ್ಪರ್ಧಿಗಳು; ಹಂಗಾಮ ಶುರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2025, 5:27 IST
Last Updated 25 ನವೆಂಬರ್ 2025, 5:27 IST
<div class="paragraphs"><p>ರಜತ್, ಮೋಕ್ಷಿತಾ,&nbsp;ತ್ರಿವಿಕ್ರಮ್, ಚೈತ್ರಾ</p></div>

ರಜತ್, ಮೋಕ್ಷಿತಾ, ತ್ರಿವಿಕ್ರಮ್, ಚೈತ್ರಾ

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡ ಬಿಗ್‌ಬಾಸ್‌ 12ನೇ ಆವೃತ್ತಿ 58ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಅಚ್ಚರಿ ಎಂಬಂತೆ ಬಿಗ್‌ಬಾಸ್‌ ಮನೆಗೆ ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಹೀಗಾಗಿ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯಲ್ಲಿ ಪಾರ್ಟಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಮೋಕ್ಷಿತಾ ಪೈ, ಚೈತ್ರಾ, ರಜತ್ ಹಾಗೂ ತ್ರಿವಿಕ್ರಮ್ ಅತಿಥಿಗಳಾಗಿ ಬಂದಿದ್ದಾರೆ. ಬಿಗ್‌ಬಾಸ್‌ ಮನೆಗೆ ಮಾಜಿ ಸ್ಪರ್ಧಿಗಳು ಬರುತ್ತಿದ್ದಂತೆ ಎಲ್ಲರೂ ಅಚ್ಚರಿಯಾಗಿದ್ದಾರೆ.

ಬಿಗ್‌ಬಾಸ್ ಅರಮನೆಗೆ ಅತಿಥಿಗಳಾಗಿ ಬಂದಿದ್ದ ಉಗ್ರಂ ಮಂಜು, ಮೋಕ್ಷಿತಾ ಪೈ, ಚೈತ್ರಾ, ರಜತ್ ಹಾಗೂ ತ್ರಿವಿಕ್ರಮ್‌ ಅವರನ್ನು ಮನೆಮಂದಿ ಸ್ವಾಗತಿಸಿದ್ದಾರೆ. ಆಗ ರಜತ್‌ ಅವರು ಗಿಲ್ಲಿ ಮುಂದೆ ಕಾವು ಎಂದು ಕರೆದಿದ್ದಾರೆ. ಆ ಕೂಡಲೇ ಗಿಲ್ಲಿ, ‘ಕಾವು ಅಂತ ಅಂದರೆ ನಮಗೆ ತುಂಬಾ ನೋವಾಗುತ್ತದೆ’ ಎಂದರು. ‘ನೋವಾಗಲಿ ಅದಕ್ಕೆ ತಾನೇ ನಾವು ಬಂದಿದ್ದು’ ಅಂತ ರಜತ್‌ ಹಾಗೂ ತ್ರಿವಿಕ್ರಮ್ ಕಾಲೆಳೆದಿದ್ದಾರೆ. ಇಂದು ರಾತ್ರಿ 9.30ಕ್ಕೆ ಪ್ರಸಾರ ಆಗುವ ಸಂಚಿಕೆಯಲ್ಲಿ ಅತಿಥಿಗಳಾಗಿ ಮನೆಗೆ ಬಂದಿದ್ದ ಮಾಜಿ ಸ್ಪರ್ಧಿಗಳು ಏನೆಲ್ಲಾ ತರಲೆ. ತಮಾಷೆ ಮಾಡಿದ್ದಾರೆ ಎಂದು ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.