ADVERTISEMENT

BIGG BOSS 12: ಅಮ್ಮನನ್ನು ನೋಡಿ ಕಣ್ಣೀರಿಟ್ಟ ರಾಶಿಕಾ, ಸೂರಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2025, 6:19 IST
Last Updated 23 ಡಿಸೆಂಬರ್ 2025, 6:19 IST
<div class="paragraphs"><p>ರಾಶಿಕಾ, ಸೂರಜ ಸಿಂಗ್ </p></div>

ರಾಶಿಕಾ, ಸೂರಜ ಸಿಂಗ್

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ 86ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು 11 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 86 ದಿನಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮ ಕುಟುಂಬಸ್ಥರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದರು. ಇದೀಗ ಬಿಗ್‌ಬಾಸ್‌, ಮನೆಮಂದಿಗೆ ಅಚ್ಚರಿ ಉಡುಗೊರೆ ನೀಡಿದ್ದಾರೆ.

ADVERTISEMENT

ಈ ವಾರ ಬಿಗ್‌ಬಾಸ್ ಮನೆಗೆ ಒಬ್ಬೊಬ್ಬರಾಗಿ ಸ್ಪರ್ಧಿಗಳ ಕುಟುಂಬಸ್ಥರು ಬರುತ್ತಿದ್ದಾರೆ. ಈಗಾಗಲೇ ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್‌ ಮನೆಗೆ ಸೂರಜ್ ಹಾಗೂ ರಾಶಿಕಾ ಅವರ ಕುಟುಂಬದವರು ಬಂದಿದ್ದಾರೆ.

ರಾಶಿಕಾ ಸಹೋದರ ಹೆಲ್ಮೆಟ್‌ ಹಾಕಿಕೊಂಡು ಬಿಗ್‌ಬಾಸ್‌ ಮನೆಗೆ ನುಗ್ಗಿದ್ದಾರೆ. ಯಾರೋ ಅನಾಮಿಕ ಮನೆಗೆ ಬಂದ ಎಂದು ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿ ಓಡಿ ಹೋಗಿದ್ದಾರೆ. ಬಳಿಕ ಆತನನ್ನು ಹಿಡಿದು ಹೆಲ್ಮೆಟ್‌ ತೆಗೆದಾಗ ಅವರು ಬೇರೆ ಯಾರೂ ಆಗಿರಲಿಲ್ಲ. ಅದು ರಾಶಿಕಾ ತಮ್ಮ ಎಂಬುದು ಗೊತ್ತಾಗಿದೆ. ತಮ್ಮನನ್ನು ನೋಡುತ್ತಿದ್ದಂತೆ ರಾಶಿಕಾ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ರಾಶಿಕಾ ಅವರ ತಾಯಿ ಕೂಡ ಮನೆಗೆ ಪ್ರವೇಶ ಮಾಡಿದ್ದಾರೆ. ಅಮ್ಮ ಹಾಗೂ ಮಗಳ ದೃಶ್ಯ ಸಾಕಷ್ಟು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು. ‌

ಬಿಗ್‌ಬಾಸ್‌ ಸ್ಪರ್ಧಿಗಳು

ಮಾತ್ರವಲ್ಲ, ಸೂರಜ್ ಅವರ ತಾಯಿ ಕೂಡ ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದಾರೆ. ಆದರೆ ಬಿಗ್‌ಬಾಸ್‌ ಸೂರಜ್‌ಗೆ ಟ್ವಿಸ್ಟ್‌ ಒಂದನ್ನು ಕೊಟ್ಟಿದ್ದರು. ಪ್ರೊಮೋದಲ್ಲಿ ಸೂರಜ್‌ಗಾಗಿ ಅವರ ತಾಯಿ ಖಾಲಿ ಬಾಕ್ಸ್‌ ಅನ್ನು ಕಳಿಸಿದ್ದರು. ಅದರಲ್ಲಿ, ನನಗಾಗಿ ಏನಾದರು ಅಡುಗೆ ಮಾಡಿ ಕಳಿಸಿಕೊಡು ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ತಾಯಿಗೋಸ್ಕರ ಅಡುಗೆ ಮಾಡುತ್ತಿದ್ದಂತೆ ಟಿವಿಯಲ್ಲಿ ಸೂರಜ್‌ ತಾಯಿ ಕನ್ಫೆಷನ್ ಕೊಠಡಿಯಲ್ಲಿ ಕುಳಿತುಕೊಂಡ ದೃಶ್ಯ ಕಂಡಿದೆ. ಆ ಕೂಡಲೇ ಸೂರಜ್‌ ಕನ್ಫೆಷನ್ ಕೊಠಡಿಗೆ ಅಳುತ್ತಾ ಓಡಿ ಹೋಗಿರುವುದು ಪ್ರೊಮೋದಲ್ಲಿ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.