ADVERTISEMENT

ಬಿಗ್‌ಬಾಸ್ ಗೆದ್ದು ಬೀಗಿದ ಗಿಲ್ಲಿ ನಟ, ರನ್ನರ್‌ ಅಪ್‌ ಆದ ರಕ್ಷಿತಾ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 18:03 IST
Last Updated 18 ಜನವರಿ 2026, 18:03 IST
<div class="paragraphs"><p>ಗಿಲ್ಲಿ ನಟ</p></div>

ಗಿಲ್ಲಿ ನಟ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್​ಬಾಸ್​ ಸೀಸನ್ 12ರ ವಿಜೇತರು ಯಾರಾಗಲಿದ್ದಾರೆ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಬಾರಿಯ ಬಿಗ್‌ಬಾಸ್‌ 12ರ ವಿಜೇತರ ಹೆಸರನ್ನು ಕಿಚ್ಚ ಸುದೀಪ್‌ ಅವರು ವೇದಿಕೆ ಮೇಲೆ ಘೋಷಿಸಿದ್ದಾರೆ.

ADVERTISEMENT

ಗಿಲ್ಲಿ ನಟ, ಸುದೀಪ್, ರಕ್ಷಿತಾ ಶೆಟ್ಟಿ

ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್‌ಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಈ ಬಾರಿಯ ಬಿಗ್‌ಬಾಸ್‌ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್‌ ಅಪ್‌ ಆಗಿದ್ದಾರೆ.

ಈ ಬಾರಿ ಟಾಪ್​ 5 ಸ್ಥಾನದಲ್ಲಿ ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಇದ್ದರು. ಈ ಟಾಪ್​ 5 ಫೈನಲಿಸ್ಟ್​ಗಳ ಪೈಕಿ ಗಿಲ್ಲಿ ನಟ ಬಿಗ್​ಬಾಸ್​ ಸೀಸನ್​ 12ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರ ಮಧ್ಯೆ ಪೈಪೋಟಿ ಜೋರಾಗಿತ್ತು.

ಕೊನೆಗೂ ಗಿಲ್ಲಿ ನಟ ಬಿಗ್‌ಬಾಸ್‌ ಗೆದ್ದು ಬೀಗಿದ್ದಾರೆ. ಇನ್ನು, ಗಿಲ್ಲಿ ನಟ ಅವರು ಟ್ರೋಫಿಯೊಂದಿಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಕಾಮಿಡಿ ಮೂಲಕವೇ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದರು. ಇದೀಗ ಕೊನೆಯದಾಗಿ ಬಿಗ್‌ಬಾಸ್‌ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.