
ಕಿಚ್ಚ ಸುದೀಪ್, ಅಶ್ವಿನಿ ಗೌಡ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಸೀಸನ್ 12ರ ಇಂದಿನ ವಾರದ ಕತೆ ಸುದೀಪ್ ಜೊತೆಯ ಸಂಚಿಕೆಯಲ್ಲಿ ಅಶ್ವಿನಿ ಗೌಡ ಅವರಿಗೆ ಸುದೀಪ್ ಅವರು ತರಾಟೆ ತೆಗೆದುಕೊಂಡಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಸುದೀಪ್ ಅವರು,‘ಅಶ್ವಿನಿ ಅವರೇ ಎಲ್ಲಾ ಓಕೆ ಆದರೆ ಊಟ ಬಿಟ್ಟಿದ್ದು ಯಾಕೆ? ಮೊದಲು ನೀವು ಎಲ್ಲರಿಗೂ ಗೌರವ ಕೊಟ್ಟು, ಗೌರವ ತೆಗೆದುಕೊಳ್ಳಿ’ ಎಂದು ಕಿವಿಮಾತು ಹೇಳಿದ್ದಾರೆ.
ಸುದೀಪ್ ಹೇಳಿದ್ದೇನು?
‘ಅಶ್ವಿನಿ ಅವರೇ ಒಂದು ಟಾಸ್ಕ್ ಬರುತ್ತೆ. ನೀವು ಉಸ್ತುವಾರಿಯಾಗಿ ಸರಿಯಾಗಿ ನಿಭಾಯಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಘು, ಉಸ್ತುವಾರಿ ಅಂದರೆನೇ ಗೊತ್ತಿಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ. ಅದಾದ ಬಳಿಕ ಸುದೀಪ್, ‘ನಿಮಗೆ ಕಾಣಿಸಲಿಲ್ವಾ? ಅಲ್ಲಿ ನಿಯಮದ ಪುಸ್ತಕದಲ್ಲಿ ಇರಲಿಲ್ವಾ? ನಿಮ್ಮ ಈ ಒಂದು ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ನಾನು ಚಪ್ಪಾಳೆ ತಟ್ಟಲಾ ಅಥವಾ ಸೆಲ್ಯೂಟ್ ಹೊಡೆಯಲಾ? ಇನ್ನೊಂದು ಕಡೆ ಊಟ ಬಿಟ್ಟು ಕ್ಷಮೆ ಕೇಳಿಸಿಕೊಳ್ಳೋದು. ಊಟ ಬಿಟ್ಟು ಕೂತುಕೊಳ್ಳೋದು ಒಂದು ಎಮೋಷನಲ್ ಬ್ಲ್ಯಾಕ್ಮೇಲ್ ಆಗಿಬಿಡುತ್ತೆ. ನಂಗೆ ಅಲ್ಲಿ ಯಾರು ಊಟ ಬಿಟ್ಟರು ಅಂತಾನೇ ಅರ್ಥ ಆಗಿಲ್ಲ. ಇವತ್ತು ನಾನು ಎಲ್ಲವನ್ನೂ ಮುಖದ ಮೇಲೆ ಹೊಡೆದ ಹಾಗೇ ಹೇಳ್ತೀನಿ’ ಎಂದು ಗರಂ ಆಗಿದ್ದಾರೆ.
ಹೀಗಾಗಿ ಇವತ್ತಿನ ಸಂಚಿಕೆ ಕುತೂಹಲ ಮೂಡಿಸಿದೆ. ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಯಾರಿಗೆಲ್ಲಾ ತರಾಟೆ ತೆಗೆದುಕೊಂಡಿದ್ದಾರೆ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.