ADVERTISEMENT

ಬಿಗ್‌ಬಾಸ್‌ ಮನೆಯಿಂದ ಏಕಾಏಕಿ ಆಚೆಬಂದ್ರಾ ಮಲ್ಲಮ್ಮ? ಇಲ್ಲಿದೆ ಅಸಲಿಯತ್ತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2025, 8:53 IST
Last Updated 29 ಅಕ್ಟೋಬರ್ 2025, 8:53 IST
<div class="paragraphs"><p>ಮಲ್ಲಮ್ಮ</p></div>

ಮಲ್ಲಮ್ಮ

   

ಚಿತ್ರ: ಇನ್‌ಸ್ಟಾಗ್ರಾಮ್

ಬಿಗ್‌ಬಾಸ್‌ ಮನೆಯಿಂದ ಮಲ್ಲಮ್ಮ ಆಚೆ ಬಂದಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಇದೀಗ ಮಲ್ಲಮ್ಮ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ನಿರ್ವಹಿಸುವವರು ಸ್ಪಷ್ಟನೆ ನೀಡಿದ್ದಾರೆ. ಇದೊಂದು ಸುಳ್ಳು ಸುದ್ದಿ, ಎಲ್ಲರೂ ಮಲ್ಲಮ್ಮ ಅವರಿಗೆ ವೋಟ್‌ ಮಾಡಿ ಎನ್ನುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ADVERTISEMENT

ಮಲ್ಲಮ್ಮ

ಮಲ್ಲಮ್ಮ ಬಿಗ್‌ಬಾಸ್‌ ಮನೆಗೆ ಅಚ್ಚರಿ ರೀತಿಯಲ್ಲಿ ಪ್ರವೇಶ ಪಡೆದುಕೊಂಡಿದ್ದರು. ಮನೆಗೆ ಕಾಲಿಡುವ ಮುನ್ನ ಕಿಚ್ಚ ಸುದೀಪ್‌ ಮುಂದೆ ‘ನಾನು ಎಲ್ಲರಂತೆ ಆಟ ಆಡುತ್ತೇನೆ’ ಎಂದಿದ್ದರು. ಮಲ್ಲಮ್ಮ ಅವರಿಗೆ ವಯಸ್ಸಾಗಿದ್ದರು, ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಿಗ್‌ಬಾಸ್‌ ಮನೆಯ ಕೆಲವು ನಿಯಮಗಳು, ಆಟದ ವಿಚಾರಗಳು ಅವರಿಗೆ ಅರ್ಥ ಆಗದಿದ್ದರೂ ಕೂಡ ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಡಾಗ್ ಸತೀಶ್, ಚಂದ್ರಪ್ರಭ, ಮಲ್ಲಮ್ಮ

ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದ ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಗೊಂದಲದಲ್ಲಿದ್ದರು. ಹೀಗಾಗಿ ‘ಪ್ರಜಾವಾಣಿ’ ಮಲ್ಲಮ್ಮ ಅವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತಿರುವವರನ್ನು ಸಂಪರ್ಕಿಸಿತು. ಆಗ ಪ್ರತಿಕ್ರಿಯೆ ನೀಡಿದ ಅವರು, ‘ಮಲ್ಲಮ್ಮ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದಿದ್ದಾರೆ ಎಂಬುವುದು ಸುಳ್ಳು ಸುದ್ದಿ. ಅಭಿಮಾನಿಗಳು ಮಲ್ಲಮ್ಮರನ್ನು ಬೆಂಬಲಿಸಿ, ಅವಕಾಶ ಸಿಕ್ಕರೆ ಅದ್ಭುತವಾಗಿ ಆಡಬಲ್ಲರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.