
ರಘು, ರಾಶಿಕಾ
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡು ಸಾಗುತ್ತಿದೆ. ಈಗ ಬಿಗ್‌ಬಾಸ್ ಮನೆ ಬಿ.ಬಿ ಕಾಲೇಜ್ ಆಗಿ ಬದಲಾಗಿದೆ. ಈ ನಡುವೆ ಏಕಾಏಕಿ ರಘು ವಿರುದ್ಧ ರಾಶಿಕಾ ಆಕ್ರೋಶ ಹೊರ ಹಾಕಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಕ್ಯಾಪ್ಟನ್ ರಘು ಜೊತೆಗೆ ರಾಶಿಕಾ ಗಲಾಟೆ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ರಘುಗೆ ಸ್ಪರ್ಧಿಗಳ ಮನೆಯಿಂದ ಕರೆಗಳು ಬಂದಿವೆ. ಆಗ ಧನುಷ್ಯ ತಾಯಿ ‘ನನ್ನ ಮಗ ಧನುಷ್ಯ, ಎಲ್ಲರ ಜೊತೆಗೆ ಚೆನ್ನಾಗಿ ಆಡಬೇಕು’ ಎಂದು ಹೇಳಿದ್ದಾರೆ. ಅಮ್ಮನ ಧ್ವನಿ ಕೇಳಿಸುತ್ತಿದ್ದಂತೆ ಧನುಷ್ಯ ಕಣ್ಣೀರಿಟ್ಟಿದ್ದಾರೆ.
ಇದಾದ ಬಳಿಕ ರಾಶಿಕಾ ಸಹೋದರನಿಂದ ಕರೆ ಬಂದಿದೆ. ಇದೇ ವೇಳೆ ರಘು, ‘ರಾಶಿಕಾ ಬಿಗ್‌ಬಾಸ್ ಮನೆಯಲ್ಲಿ ಕಳೆದು ಹೋಗಿದ್ದಾರೆ’ ಎಂದಿದ್ದಾರೆ. ಅದಕ್ಕೆ ಕೋಪಗೊಂಡ ರಾಶಿಕಾ ಏಕಾಏಕಿ ರಘು ಮೇಲೆ ಸಿಟ್ಟಾಗಿದ್ದಾರೆ. ಅಲ್ಲದೇ ರಘು ಅವರ ವಿರುದ್ಧ (ಪಕ್ಷಪಾತ) ಫೇವರಿಸಂ ಆರೋಪ ಮಾಡಿದ್ದಾರೆ. ಸದ್ಯ ಬಿಗ್‌ಬಾಸ್ ಸ್ಪರ್ಧಿಗಳು ಈಗ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳ ತರ್ಲೆ, ತುಂಟಾಟ ವೀಕ್ಷಕರಿಗೆ ಮಜಾ ಕೊಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.