ADVERTISEMENT

ಬಿಗ್‌ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ವಿಜೇತ: ಗಿಲ್ಲಿ ನಟನಿಗೆ ಸಿಕ್ಕ ಮತಗಳೆಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 6:50 IST
Last Updated 19 ಜನವರಿ 2026, 6:50 IST
<div class="paragraphs"><p>ಗಿಲ್ಲಿ ನಟ, ಕಿಚ್ಚ ಸುದೀಪ್</p></div>

ಗಿಲ್ಲಿ ನಟ, ಕಿಚ್ಚ ಸುದೀಪ್

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಟ್ರೋಫಿ ಮಳವಳ್ಳಿಯ ಹಳ್ಳಿಹೈದ ಗಿಲ್ಲಿ ನಟನ ಕೈಗೆ ಸೇರಿದೆ. ಕರುನಾಡಿನ ಜನರ ಮನ ಗೆದ್ದ ಗಿಲ್ಲಿ ನಟ, ಬಿಗ್‌ಬಾಸ್‌ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಗ್ರ್ಯಾಂಡ್ ಫಿನಾಲೆಗೂ ಮುನ್ನ ಚುನಾವಣೆಯ ರೀತಿಯಲ್ಲಿ ಗಿಲ್ಲಿ ಪರ ಅಬ್ಬರದ ಪ್ರಚಾರ ಮಾಡಲಾಗಿತ್ತು. ಎಲ್ಲೆಲ್ಲೂ ಗಿಲ್ಲಿ ಬಗ್ಗೆಯೇ ಮಾತುಕತೆ ನಡೆದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಗಿಲ್ಲಿ ನಟ ಸೀಸನ್ 12ರ ವಿಜೇತರಾಗಿದ್ದಾರೆ.

ADVERTISEMENT

ಗಿಲ್ಲಿ ನಟ

ಇದೇ ಮೊದಲ ಬಾರಿಗೆ ಒಬ್ಬ ಬಿಗ್‌ಬಾಸ್‌ ಸ್ಪರ್ಧಿಗೆ ದಾಖಲೆಯ ವೋಟ್‌ಗಳು ಬಂದಿದೆ. ಕಳೆದ ಸೀಸನ್ ವಿಜೇತರಾಗಿ ಹೊರ ಹೊಮ್ಮಿರುವ ಹನುಮಂತ ಅವರಿಗೆ 5 ಕೋಟಿ ಮತಗಳು ಬಂದಿದ್ದವು. ಆದರೆ, ಈ ಬಾರಿಯ ಬಿಗ್‌ಬಾಸ್‌ ಸೀಸನ್ 12ರ ವಿನ್ನರ್‌ ಗಿಲ್ಲಿ ನಟನಿಗೆ ಬರೋಬ್ಬರಿ 46 ಕೋಟಿಗೂ ಅಧಿಕ ಮತಗಳು ಬಂದಿವೆ. ಈ ಮೂಲಕ ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲೇ ಅಧಿಕ ಮತಗಳನ್ನು ಪಡೆದು ಗಿಲ್ಲಿ ನಟ ದಾಖಲೆ ಮಾಡಿದ್ದಾರೆ.

ಪ್ರತಿ ಸೀಸನ್​ನಂತೆಯೇ ಈ ಬಾರಿಯೂ ಬಿಗ್‌ಬಾಸ್‌ ವಿನ್ನರ್‌ ಗಿಲ್ಲಿಗೆ ಟ್ರೋಫಿ ಜೊತೆಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್‌ ಅವರು ವೈಯಕ್ತಿಕವಾಗಿ ಪ್ರೀತಿಯಿಂದ ₹10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.