ADVERTISEMENT

BBK12: ಈ ವಾರ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿರುವ ಸ್ಪರ್ಧಿಗಳು ಇವರೇ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2025, 5:47 IST
Last Updated 4 ಅಕ್ಟೋಬರ್ 2025, 5:47 IST
<div class="paragraphs"><p>ಮಲ್ಲಮ್ಮ, ಧನುಷ್, ಕಾವ್ಯ, ಗಿಲ್ಲಿ ನಟ</p></div>

ಮಲ್ಲಮ್ಮ, ಧನುಷ್, ಕಾವ್ಯ, ಗಿಲ್ಲಿ ನಟ

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಾಗಿ 6 ದಿನ ಕಳೆದಿವೆ. ಬಿಗ್‌ಬಾಸ್‌ ಮನೆಗೆ ಬಂದ ಮೊದಲ ವಾರವೇ ಸ್ಪರ್ಧಿಗಳ ನಡುವೆ ಗಲಾಟೆ, ಕಿರುಚಾಟ, ವೈಮನಸ್ಸು ಮೂಡಿದೆ. ಈ ಮಧ್ಯೆ ನಿನ್ನೆಯ ಸಂಚಿಕೆಯಲ್ಲಿ ಬಿಗ್​ಬಾಸ್​ನಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈ ವಾರ ಬಿಗ್‌ಬಾಸ್‌ ಮನೆಯಿಂದ ಯಾರು ಆಚೆ ಹೋಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ADVERTISEMENT

ಚಿತ್ರ ಕೃಪೆ: colorskannadaofficial

ಯಾರೆಲ್ಲಾ ನಾಮಿನೇಟ್​..?

ಒಂಟಿಯಾಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಧನುಷ್ ಗೌಡ, ಮಲ್ಲಮ್ಮ ಹಾಗೂ ಜಂಟಿಯಾಗಿ ಪ್ರವೇಶ ಮಾಡಿದ್ದ ಅಭಿಷೇಕ್-ಅಶ್ವಿನಿ, ಗಿಲ್ಲಿ ನಟ-ಕಾವ್ಯ, ಅಮಿತ್-ಕರಿಬಸಪ್ಪ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಉಳಿದವರು ಈ ವಾರ ನಾಮಿನೇಷನ್‌ ಪ್ರಕ್ರಿಯೆಯಿಂದ ಬಜಾವ್ ಆಗಿದ್ದಾರೆ.

ಇನ್ನು, ಈ ಬಾರಿಯ ಬಿಗ್‌ಬಾಸ್‌ ಸೀಸನ್ 12ರ ಮೊದಲ ವಾರ ಆಗಿದ್ದು, ಇಂದು ರಾತ್ರಿ 9.00 ಗಂಟೆಗೆ ಕಿಚ್ಚ ಸುದೀಪ್‌ರ ಮೊದಲ ಪಂಚಾಯ್ತಿ ನಡೆಯಲಿದೆ. ಹೀಗಾಗಿ ವೀಕ್ಷಕರು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ. ಜೊತೆಗೆ ಇಂದು ಕಿಚ್ಚ ಸುದೀಪ್‌ ಯಾರಿಗೆ ತರಾಟೆ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.