
ಬಿಗ್‌ಬಾಸ್ ಟ್ರೋಫಿ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12 ಅಂತ್ಯ ಹೇಳಲು ಸಜ್ಜಾಗಿದೆ. ಇಂದು (ಜ.18) ಪ್ರಸಾರವಾಗಲಿರುವ ಸಂಚಿಕೆಯ ಕೊನೆಯಲ್ಲಿ ಬಿಗ್‌ಬಾಸ್ ವಿಜೇತರ ಹೆಸರು ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ. ವಿಶೇಷ ಏನೆಂದರೆ ಈ ಬಾರಿಯ ಬಿಗ್‌ಬಾಸ್ ಟ್ರೋಫಿಯು ಹಲವಾರು ವಿಶಿಷ್ಟತೆಯನ್ನು ಒಳಗೊಂಡಿದೆ.
ಈ ಕುರಿತು ಶನಿವಾರದ (ಜ.17) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಸ್ಪರ್ಧಿಗಳಿಗೆ ಈ ಬಾರಿ ಟ್ರೋಫಿಯ ವಿಶೇಷತೆ ಏನು ಎಂಬುವುದರ ಬಗ್ಗೆ ವೇದಿಕೆ ಮೇಲೆ ಹೇಳಿದ್ದಾರೆ.
ಬಿಗ್‌ಬಾಸ್ ಟ್ರೋಫಿ
ಇದೇ ಮೊದಲ ಬಾರಿಗೆ ಹೊಸ ಶೈಲಿಯಲ್ಲಿ ಈ ಟ್ರೋಫಿಯನ್ನು ತಯಾರಿಸಲಾಗಿದೆ. ಬಿಗ್‌ಬಾಸ್ ಮನೆಯನ್ನು ಹೇಗೆ ನಿರ್ಮಾಣ ಮಾಡಲಾಗಿದೆಯೋ, ಅದೇ ಸಂಸ್ಕೃತಿಯಲ್ಲಿ ಈ ಟ್ರೋಫಿಯನ್ನು ಸಿದ್ಧಗೊಳಿಸಲಾಗಿದೆ.
ಕರ್ನಾಟಕದ ಅಷ್ಟೂ ಸಂಸ್ಕೃತಿ ಈ ಟ್ರೋಫಿಯಲ್ಲಿದೆ. ಮೈಸೂರು ಅರಮನೆ, ದರ್ಪಣ ಸುಂದರಿ, ಆನೆ, ಯಕ್ಷಗಾನ ಸೇರಿದಂತೆ ಕರ್ನಾಟಕದ ಸಂಸ್ಕೃತಿಯನ್ನು ಒಳಗೊಂಡಿದೆ. ಸದ್ಯ ಈ ಬಾರಿಯ ಬಿಗ್‌ಬಾಸ್ ವಿನ್ನರ್ ಕೈಗೆ ಈ ವಿಶೇಷ ಟ್ರೋಫಿ ಸೇರಲಿದೆ. ಅದು ಯಾರೆಂದು ಗ್ರ್ಯಾಂಡ್ ಫಿನಾಲೆಯ ಕೊನೆಯ ಕ್ಷಣದಲ್ಲಿ ತಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.