ADVERTISEMENT

ಬಿಗ್‌ಬಾಸ್‌ನಲ್ಲಿ ಸಂಜನಾ ಗಲ್ರಾನಿ ಆರ್ಭಟ: ಕನ್ನಡತಿ ಆಟಕ್ಕೆ ದಂಗಾದ ಮನೆಮಂದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2025, 5:16 IST
Last Updated 27 ಸೆಪ್ಟೆಂಬರ್ 2025, 5:16 IST
<div class="paragraphs"><p>ಚಿತ್ರ:&nbsp;<strong><a href="https://www.instagram.com/sanjjanaagalrani/">sanjjanaagalrani</a></strong></p></div>

ಚಿತ್ರ: sanjjanaagalrani

   

ಕನ್ನಡದ ಬಿಗ್‌ಬಾಸ್‌ನ 12ನೇ ಆವೃತ್ತಿ ಭಾನುವಾರ ಆರಂಭಗೊಳ್ಳುತ್ತಿದೆ. ಹೀಗಾಗಿ ಈ ಬಾರಿಯ ಆವೃತ್ತಿಗೆ ಯಾವೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ. ಇದರ ಮಧ್ಯೆ ತೆಲುಗು ಬಿಗ್‌ಬಾಸ್ ಮನೆಯಲ್ಲಿ ನಟಿ ಸಂಜನಾ ಗಲ್ರಾನಿ ಆರ್ಭಟ ಜೋರಾಗಿದೆ.

ಚಿತ್ರ ಕೃಪೆ: sanjjanaagalrani

ಕನ್ನಡದ ನಟಿ ಸಂಜನಾ ಗಲ್ರಾನಿ ತೆಲುಗು ಬಿಗ್​​ಬಾಸ್ ಸೀಸನ್ 9ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್​​ಬಾಸ್​​ಗೆ ಸ್ಪರ್ಧಿಯಾಗಿ ಹೋಗಿದ್ದ ನಟಿ ಸಂಜನಾ ಈಗ ತೆಲುಗು ಬಿಗ್​​ಬಾಸ್ ಮನೆಯಲ್ಲಿ ಅಬ್ಬರಿಸುತ್ತಿದ್ದಾರೆ.

ಸಹ ಸ್ಪರ್ಧಿಗಳ ಜೊತೆಗೆ ಉತ್ತಮ ಒಡನಾಟ ಬೆಳೆಸಿಕೊಂಡ ನಟಿ ಸಂಜನಾ, ತಪ್ಪು ಕಂಡುಬಂದಲ್ಲಿ ‌ಧ್ವನಿ ಎತ್ತುತ್ತಿದ್ದಾರೆ. ಹೀಗಾಗಿ ಸಹ ಸ್ಪರ್ಧಿಗಳು ಕನ್ನಡ ನಟಿಯ ಮಾತಿಗೆ ದಂಗಾಗಿದ್ದಾರೆ. ಅಲ್ಲದೆ ಗುರುವಾರದ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಮಂದಿ ನಟಿಯನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದರು. ಹೀಗಾಗಿ ನಟಿ ಸಂಜನಾ ಅವರು ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಇನ್ನು, ಬಿಗ್‌ಬಾಸ್‌ ಏಕಾಏಕಿ ಮಧ್ಯರಾತ್ರಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ. ಈ ವೇಳೆ ಬಿಗ್‌ಬಾಸ್‌ ಮನೆಯಿಂದ ಆಚೆ ಹೋಗುವ ಸ್ಪರ್ಧಿ ಸಂಜನಾ ಎಂದು ಕೂಗಿದ್ದಾರೆ. ಆಗ ಇಡೀ ಮನೆಮಂದಿ ಅಚ್ಚರಿಗೊಂಡಿದ್ದಾರೆ. ಎಲಿಮಿನೇಟ್‌ ಆದ ಸಂಜನಾರನ್ನು ಆ ಕೂಡಲೇ ಮನೆಮಂದಿ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಆದರೆ ಬಿಗ್‌ಬಾಸ್‌ ಟ್ವಿಸ್ಟ್‌ ಒಂದನ್ನು ಕೊಟ್ಟಿದ್ದು, ಎಲಿಮಿನೇಟ್‌ ಆದ ಸಂಜನಾ ಗಲ್ರಾನಿ ಅವರನ್ನು ರಹಸ್ಯ ಕೊಠಡಿಗೆ (ಸೀಕ್ರೆಟ್ ರೂಮ್) ಕಳುಹಿಸಿದ್ದಾರೆ. ರಹಸ್ಯ ಕೊಠಡಿಯಲ್ಲಿ ಕುಳಿತುಕೊಂಡು ಸಂಜನಾ ಮನೆಮಂದಿಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಹಸ್ಯ ಕೊಠಡಿಯಿಂದ ಆಚೆಬಂದ ಸಂಜನಾ ಮತ್ತೆ ರೆಬೆಲ್‌ ಆಗುತ್ತಾರಾ ಅಂತ ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.