ADVERTISEMENT

‘ಲಾಕ್ ಅಪ್’ ರಿಯಾಲಿಟಿ ಶೋ ಟೀಸರ್ ಬಿಡುಗಡೆ: ನಿರೂಪಕಿಯಾಗಿ ಕಂಗನಾ ರನೌತ್

ಐಎಎನ್ಎಸ್
Published 11 ಫೆಬ್ರುವರಿ 2022, 9:37 IST
Last Updated 11 ಫೆಬ್ರುವರಿ 2022, 9:37 IST
 ‘ಲಾಕ್‌ ಅಪ್‌’ ರಿಯಾಲಿಟಿ ಶೋನಲ್ಲಿ ನಟಿ ಕಂಗನಾ ರನೌತ್ (ಇನ್‌ಸ್ಟಾಗ್ರಾಮ್ ಚಿತ್ರ)
‘ಲಾಕ್‌ ಅಪ್‌’ ರಿಯಾಲಿಟಿ ಶೋನಲ್ಲಿ ನಟಿ ಕಂಗನಾ ರನೌತ್ (ಇನ್‌ಸ್ಟಾಗ್ರಾಮ್ ಚಿತ್ರ)   

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ‘ಲಾಕ್‌ ಅಪ್‌’ ರಿಯಾಲಿಟಿ ಶೋನ ಟೀಸರ್‌ ಶುಕ್ರವಾರ ಬಿಡುಗಡೆಯಾಗಿದೆ.

ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಶೋ ಅನ್ನು ನಿರ್ಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಫೆಬ್ರುವರಿ 27ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಶೋನಲ್ಲಿ 16 ಮಂದಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ಸೆಲೆಬ್ರಿಟಿಗಳು ಯಾರೆಂಬುದು ಇನ್ನಷ್ಟೇ ಪ್ರಕಟವಾಗಬೇಕಿದೆ.

ADVERTISEMENT

ಕಂಗನಾ, ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಪ್ಪು ಮಾಡಿದ ಸ್ಪರ್ಧಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೂಲಕ ಕ್ರಮ ಜರುಗಿಸಲಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಟೀಸರ್‌ ಅನ್ನು ಕಂಗನಾ ರನೌತ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.