ADVERTISEMENT

PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ‌‘ನಾ ನಿನ್ನ ಬಿಡಲಾರೆ’ ಖ್ಯಾತಿಯ ಹಿತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2025, 11:39 IST
Last Updated 23 ಸೆಪ್ಟೆಂಬರ್ 2025, 11:39 IST
<div class="paragraphs"><p>ಬಾಲನಟಿ ಮಹಿತಾ</p></div>

ಬಾಲನಟಿ ಮಹಿತಾ

   

ಚಿತ್ರ: mahita_v_official 

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸುತ್ತಿರೋ ಪುಟಾಣಿ ಹಿತಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ.

ADVERTISEMENT

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹಿತಾ, ಹಿತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಳೆ.

ನನ್ನಮ್ಮ ಸೂಪರ್​​ ಸ್ಟಾರ್​​, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ, ಚುಕ್ಕಿತಾರೆ ಧಾರಾವಾಹಿ ಮೂಲಕ ಮನೆ ಮಾತಾಗಿದ್ದಳು ಮಹಿತಾ.


ಚುಕ್ಕಿತಾರೆ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ಬಾಲನಟಿ ಮಹಿತಾ ಸದ್ಯ ನಾ ನಿನ್ನ ಬಿಡಲಾರೆಯಲ್ಲಿ ನಟಿಸುತ್ತಿದ್ದಾಳೆ.

ಗಿಚ್ಚಿ ಗಿಲಿಗಿಲಿ ಸೀಸನ್​​ 2ರಲ್ಲಿ ಅದ್ಭುತ ನಟನೆಯ ಮೂಲಕ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಳು ಮಹಿತಾ.

ಈಗ ಪುಟಾಣಿ ಮಹಿತಾ 8ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ.

ಮಹಿತಾ ತಾಯಿ ತನುಜಾ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಮಹಿತಾ ಹುಟ್ಟುಹಬ್ಬಕ್ಕೆ ನಾ ನಿನ್ನ ಬಿಡಲಾರೆ ಧಾರಾವಾಹಿ ತಂಡ, ಮಹಿತಾ ಗೆಳೆಯ–ಗೆಳೆತಿಯರು ಬಂದು ಶುಭ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.