
ನಂದಿನಿ, ಅಶ್ವಿನ್, ಭವ್ಯಾ ಗೌಡ, ಆರತಿ ಪಡುಬಿದ್ರಿ
ಚಿತ್ರ: ಇನ್‌ಸ್ಟಾಗ್ರಾಮ್
ಜೀ ಕನ್ನಡ ವಾಹಿನಿಯಲ್ಲಿ ಇದೇ ನ.15ರಿಂದ ಶನಿವಾರ ಹಾಗೂ ಭಾನುವಾರ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಳೆದ ಸೀಸನ್‌ನಂತೆ ಈ ಬಾರಿಯೂ ಕೂಡ ಕಿರುತೆರೆಯ ಕಲಾವಿದರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.
ಜೀ ಕನ್ನಡ ವಾಹಿನಿ ಹಂಚಿಕೊಂಡ ಪ್ರೋಮೊದಲ್ಲಿ ಲಕ್ಷ್ಮೀ ನಿವಾಸ, ಅಣ್ಣಯ್ಯ, ಶ್ರಾವಣಿ ಸುಬ್ರಹ್ಮಣ್ಯ, ಗಟ್ಟಿಮೇಳ, ಕರಿಮಣಿ, ಕರ್ಣ ಸೇರಿದಂತೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಲಾವಿದರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಬಂದಿರುವುದನ್ನು ಕಾಣಬಹುದು.
ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಶ್ರಾವಣಿ ಸುಬ್ರಹ್ಮಣ್ಯ ಖ್ಯಾತಿಯ ಅಮೋಘ್ ಆದಿತ್ಯ, ಕರಿಮಣಿ ಖ್ಯಾತಿಯ ಅಶ್ವಿನ್, ಬಿಗ್‌ಬಾಸ್ ಖ್ಯಾತಿಯ ನಂದಿನಿ, ಕರ್ಣ ಭವ್ಯಾ ಗೌಡ, ಅಣ್ಣಯ್ಯ ಖ್ಯಾತಿಯ ಪ್ರತೀಕ್ಷಾ, ಬ್ರಹ್ಮಗಂಟು ಖ್ಯಾತಿಯ ಆರತಿ, ಲಕ್ಷ್ಮೀ ನಿವಾಸ ಖ್ಯಾತಿಯ ಧನಂಜಯ್, ಮಹಾನಟಿ ಖ್ಯಾತಿಯ ಪೂಜಾ ರಮೇಶ್, ಸ್ಮೈಲ್ ಗುರು ರಕ್ಷಿತ್, ಅನನ್ಯ ಅಮರ್, ಬಾಲ ಪ್ರತಿಭೆ ಅನುಪ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಗ್ಗಪ್ಪ ಎಂಟ್ರಿ ಕೊಟ್ಟಿದ್ದಾರೆ.
ಈ ಕಲಾವಿದರ ಜೊತೆಗೆ ನಾನಾ ಭಾಗಗಳಿಂದ ಆಯ್ಕೆ ಮಾಡಿದ ಪ್ರತಿಭೆಗಳನ್ನು ಜೋಡಿ ಮಾಡಲಾಗುತ್ತದೆ. ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಜೀ ಕನ್ನಡ ಹಂಚಿಕೊಂಡ ಪ್ರೋಮೊಗಳು ಸದ್ದು ಮಾಡುತ್ತಿದ್ದು, ಯಾವ ಸ್ಪರ್ಧಿ ತಮ್ಮ ಡ್ಯಾನ್ಸ್ ಮೂಲಕ ತೀರ್ಪುಗಾರರ ಮನಸ್ಸು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಅರ್ಜುನ್ ಜನ್ಯ ಇವರೊಂದಿಗೆ ರಚಿತಾ ರಾಮ್ ಕೂಡ ತೀರ್ಪುಗಾರರಾಗಿ ಇರಲಿದ್ದಾರೆ. ಇದೇ ನವೆಂಬರ್ 15ರಿಂದ ಶನಿವಾರ ಹಾಗೂ ಭಾನುವಾರ ಸಂಜೆ 7:30 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಪ್ರಾರಂಭವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.