ದೀಪಿಕಾ ದಾಸ್ ಹಾಗೂ ಪತಿ ದೀಪಕ್
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡ ಕಿರುತೆರೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ದೀಪಿಕಾ ದಾಸ್ ಪತಿ ದೀಪಕ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಬಿಗ್‌ಬಾಸ್ ಸೀಸನ್ 7 ಮತ್ತು 9ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ದೀಪಿಕಾ ದಾಸ್ ಅವರು ಅಪಾರ ಜನಪ್ರಿಯತೆ ಪಡೆದುಕೊಂಡರು.
2023ರ ಮಾರ್ಚ್ 1ರಂದು ಗೋವಾದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ದೀಪಕ್ ಎಂಬುವವರ ಜೊತೆಗೆ ಮದುವೆಯಾದರು.
ಇಂದು ದೀಪಿಕಾ ದಾಸ್ ಅವರ ಪತಿ ದೀಪಕ್ ಅವರ ಹುಟ್ಟುಹಬ್ಬ. ಪತಿಯ ಹುಟ್ಟುಹಬ್ಬವನ್ನು ಪತ್ನಿ ಖಾಸಗಿಯಾಗಿ ಆಚರಿಸಿದ್ದಾರೆ.
ಹುಟ್ಟು ಹಬ್ಬದ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ನಟಿ ದೀಪಿಕಾ ದಾಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಫೋಟೊಗಳ ಜೊತೆಗೆ ‘ನನ್ನ ಪ್ರೀತಿಯ ಪತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮೊಂದಿಗೆ ಕೊನೆಯಿಲ್ಲದ ಜಗಳ, ಕಾಳಜಿ ಮತ್ತು ಪ್ರೀತಿ. ನೀವು ನನ್ನನ್ನು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಹೇಗಿದ್ದೀರಿ ಎಂದು ನನಗೆ ಗೊತ್ತು. ನೀವು ಯಾವಾಗಲೂ ಬೆಸ್ಟ್. ನಿಮ್ಮಿಂದ ನಾನು ಶಾಶ್ವತವಾಗಿ ಅತ್ಯುತ್ತಮ ಜೀವನವನ್ನು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.