ನಟಿ ದೀಪ್ತಿ ಮಾನೆ
ಚಿತ್ರ: deepthimanne_official
ಕನ್ನಡ ಕಿರುತೆರೆ ತುಳಸಿ ಅಂತಲೇ ಖ್ಯಾತಿ ಪಡೆದುಕೊಂಡಿರೋ ನಟಿ ದೀಪ್ತಿ ಮಾನೆ ಸಂಗಾತಿಯನ್ನು ಪರಿಚಯಿಸಿದ್ದಾರೆ.
ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸುವ ಮೂಲಕ ನಟಿ ದೀಪ್ತಿ ಮಾನೆ ಜನಪ್ರಿಯತೆ ಪಡೆದುಕೊಂಡಿದ್ದರು.
ಇದೇ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದಲ್ಲಿ ನಟ ತ್ರಿವಿಕ್ರಮ್ ನಟಿಸಿದ್ದರು. ತುಳಸಿ ಮತ್ತು ಸಾಮ್ರಾಟ್ ಜೋಡಿಗೆ ವೀಕ್ಷಕರು ಪೂರ್ತಿ ಅಂಕ ನೀಡಿದ್ದರು.
ಇದೀಗ ನಟಿ ದೀಪ್ತಿ ಮಾನೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾವಿ ಪತಿ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಆ ಫೋಟೊಗಳ ಜೊತೆಗೆ YES, I’m IN LOVE ಎಂದು ನಟಿ ದೀಪ್ತಿ ಮಾನೆ ಬರೆದುಕೊಂಡಿದ್ದಾರೆ.
ಆದರೆ ನಟಿ ತಮ್ಮ ಮದುವೆ ಯಾವಾಗ? ಹುಡುಗ ಯಾರು ಎಂಬುವುದರ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ.
ಪದ್ಮಾವತಿ ಧಾರಾವಾಹಿಯ ಬಳಿಕ ನಟಿ ದೀಪ್ತಿ ಮಾನೆ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟು ಅಲ್ಲಿಯೂ ಜನಪ್ರಿಯತೆ ಪಡೆದುಕೊಂಡರು.
ಸದ್ಯ ತಾವು ಮದುವೆ ಆಗುತ್ತಿರೋ ಹುಡುಗನ ಜೊತೆಗೆ ಫೋಟೊವನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.