
ನಿರೂಪಕಿ ಅನುಪಮಾ ಗೌಡ, ಚಿರುಶ್
ಚಿತ್ರ: ಇನ್‌ಸ್ಟಾಗ್ರಾಂ
ವೀಕ್ಷಕರನ್ನು ಮತ್ತೆ ನಗಿಸುವುದಕ್ಕೆ ಸಜ್ಜಾಗಿದೆ ಗಿಚ್ಚಿ ಗಿಲಿಗಿಲಿ ಶೋ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಹಾಗೂ ಭಾನುವಾರದಿಂದ ರಾತ್ರಿ 9 ಗಂಟೆಗೆ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಒಂದೊಂದಾಗಿ ಪ್ರೋಮೊಗಳನ್ನು ಬಿಡುಗಡೆ ಮಾಡುತ್ತಿದೆ.
ಬಿಡುಗಡೆಯಾದ ಪ್ರೋಮೊದಲ್ಲಿ ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್‌ಗೆ ಪುಟಾಣಿ ಚಿರುಶ್ ಆದಿತ್ಯ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ನಿರೂಪಕಿ ಅನುಪಮಾ ಗೌಡ ಅವರಿಗೆ ಶಾಕ್ ಕೊಟ್ಟಿದ್ದಾರೆ. ಮಂಗಳೂರಿನ ಚಿರುಶ್ ಡ್ಯಾನ್ಸ್ ಮಾಡುತ್ತಲೇ ವೇದಿಕೆಗೆ ಬಂದಿದ್ದ. ಆಗ ಚಿರುಶ್‌ಗೆ ತೀರ್ಪುಗಾರರನ್ನು ಪರಿಚಯಿಸುತ್ತಿದ್ದರು.
ಆಗ ಚಿರುಶ್ ಸಾಧು ಕೋಕಿಲ ಅವರಿಗೆ, ‘ಹಾಯ್ ಸಾಧು ಸರ್ ಮತ್ತೆ’ ಎಂದು ಹೇಳಿದ್ದಾನೆ. ಬಳಿಕ ನಟಿ ಶ್ರುತಿ ಅವರು ‘ಲವ್ ಯೂ’ ಎಂದಿದ್ದಾರೆ. ಆದರೆ ಅದಕ್ಕೆ ಚಿರುಶ್ ಪ್ರತಿಕ್ರಿಯೆ ನೀಡದೆ ಟಾಂಗ್ ಕೊಟ್ಟಿದ್ದಾನೆ. ಬಳಿಕ ಅನುಪಮಾ ‘ಚಿರುಶ್ ನೀನು ಹಾಡು ಹೇಳು, ನಿನಗೆ ಹಾಡು ಹೇಳಲು ಬರೋದಿಲ್ಲ ಅಂದರು’ ಎಂದು ಹೇಳುತ್ತಾರೆ. ಆ ಕೂಡಲೇ ಚಿರುಶ್ ಹೈ ಮಂಕಿ ಸುಮ್ನೆ ಇರ್ತಿರಾ? ಎಂದು ಟಕ್ಕರ್ ಕೊಟ್ಟಿದ್ದಾನೆ. ಚಿರುಶ್ ಮಾತನ್ನು ಕೇಳುತ್ತಿದ್ದಂತೆ ತೀರ್ಪುಗಾರರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಸದ್ಯ ಇದೇ ಪ್ರೋಮೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪುಟಾಣಿಗಳು ವೀಕ್ಷಕರಿಗೆ ಭರ್ಜರಿಯಾಗಿ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ.
ಇಷ್ಟು ಸೀಸನ್‌ಗಳ ಕಾಲ ಗಿಚ್ಚಿ ಗಿಲಿಗಿಲಿ ಕಲಾವಿದರು ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದರು. ಈಗ ಸೀನಿಯರ್ಸ್‌ಗಳಿಗೆ ಟಕ್ಕರ್ ಕೊಡುವುದಕ್ಕೆ ಜೂನಿಯರ್ಸ್ ಬರುತ್ತಿದ್ದಾರೆ. ತೀರ್ಪುಗಾರರಾಗಿ ಸೃಜನ್ ಲೋಕೇಶ್ ನಟಿ ಶ್ರುತಿ ಹಾಗೂ ಸಾಧು ಕೋಕಿಲ ಇರಲಿದ್ದಾರೆ. ಅನುಪಮಾ ಗೌಡ ಅವರು ಅವರು ನಿರೂಪಣೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.