
ಕನ್ನಡದ ಬಿಗ್‌ಬಾಸ್ 90ನೇ ದಿನಕ್ಕೆ ಕಾಲಿಟ್ಟಿದ್ದು, ಫಿನಾಲೆ ವಾರ ಸಮೀಪಿಸುತ್ತಿದೆ. ಈ ನಡುವೆ ವಾರದ ಮನೆಯ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆ ಆಗಿದ್ದಾರೆ.
ಬಿಗ್‌ಬಾಸ್ ಬಿಡುಗಡೆ ಮಾಡಿದ ಪ್ರೊಮೋದಲ್ಲಿ , ‘ಸ್ವರ್ಧಿಗಳ ಕುಟುಂಬ ಸದಸ್ಯರ ಆಯ್ಕೆ ಅನುಸಾರ ಅತ್ಯಧಿಕ ಮತಗಳಿಂದ ಗಿಲ್ಲಿ ಹಾಗೂ ಅಶ್ವಿನಿ ಅವರು ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗಿದ್ದರು. ಬಿಗ್‌ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಓಟದ ಟಾಸ್ಕ್‌ನಲ್ಲಿ ಅಶ್ವಿನಿ ಅವರಿಗಿಂತ ಹೆಚ್ಚು ಚೆಂಡುಗಳನ್ನು ಬುಟ್ಟಿಗೆ ತುಂಬಿಸಿಕೊಂಡ ಗಿಲ್ಲಿ ನಟ ಅವರು ಮನೆಯ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಈ ವಾರ ಬಿಗ್ ಬಾಸ್, ಫ್ಯಾಮಿಲಿ ರೌಂಡ್ ಆಯೋಜಿಸಿದ್ದರು. ಅದರಂತೆ ಸ್ವರ್ಧಿಗಳ ಕುಟುಂಬ ಸದಸ್ಯರು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದರು. ಆ ವೇಳೆ ಅನೇಕರು ಗಿಲ್ಲಿ ನಟನ ಕುರಿತು ಹಾಡಿ ಹೊಗಳಿದ್ದರು. ಇನ್ನೂ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಗಿಲ್ಲಿ ಅವರು ಬಿಗ್‌ಬಾಸ್ ನಿಯಮಗಳನ್ನು ಸರಿಯಾಗಿ ಅನುಸರಿಸುತ್ತಾರಾ ಅಥವಾ ಮನೆಯ ಮಂದಿಯ ವಿರೋಧಕ್ಕೆ ಕಾರಣರಾಗುತ್ತಾರಾ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.