ADVERTISEMENT

ಕುಟುಂಬದಲ್ಲಿ ತುರ್ತು: ಬಿಗ್‌ಬಾಸ್‌ ಮನೆಯಿಂದ ಹೊರಬಂದ ಗೋಲ್ಡ್‌ ಸುರೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2024, 10:36 IST
Last Updated 15 ಡಿಸೆಂಬರ್ 2024, 10:36 IST
<div class="paragraphs"><p>ಗೋಲ್ಡ್‌ ಸುರೇಶ್‌</p></div>

ಗೋಲ್ಡ್‌ ಸುರೇಶ್‌

   

ಬೆಂಗಳೂರು: ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಗೋಲ್ಡ್‌ ಸುರೇಶ್‌ ಅವರು ತುರ್ತಾಗಿ ಮನೆಯಿಂದ ಹೊರನಡೆದಿದ್ದಾರೆ.

ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಇರುವ ಕಾರಣ ಸುರೇಶ್‌ ಅವರು ತಕ್ಷಣವೇ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೊರ ಬರುವಂತೆ ಮನೆಯೊಳಗೆ ಬಿಗ್‌ಬಾಸ್‌ ಘೋಷಿಸಿದ್ದಾರೆ.

ADVERTISEMENT

ಬಿಗ್‌ಬಾಸ್‌ ಕಾರ್ಯಕ್ರಮ 12 ವಾರಕ್ಕೆ ಕಾಲಿಟ್ಟಿದ್ದು, ಟಾಸ್ಕ್‌ ಗೆದ್ದು ಗೋಲ್ಡ್‌ ಸುರೇಶ್‌ ಕ್ಯಾಪ್ಟನ್‌ ಆಗಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಹೊರಹೋದ ಕಾರಣ ಹೊಸ ಕ್ಯಾಪ್ಟನ್‌ ಆಯ್ಕೆಯಾಗಬೇಕಿದೆ. 

ಈ ವಾರ ಮನೆಯಿಂದ ಶಿಶಿರ್ ಅವರು ಎಲಿಮಿನೇಟ್‌ ಆಗಿದ್ದಾರೆ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.