ADVERTISEMENT

ಬಿಗ್‌ಬಾಸ್‌–15: ಸಲ್ಮಾನ್‌ ಖಾನ್‌ಗೆ ’ಮನಿಕೆ ಮಗೆ ಹಿತೆ’ ಹಾಡು ಹೇಳಿಕೊಟ್ಟ ಯೋಹನಿ!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 13:26 IST
Last Updated 9 ಅಕ್ಟೋಬರ್ 2021, 13:26 IST
ಯೋಹನಿ, ಸಲ್ಲು ಬಾಯ್‌
ಯೋಹನಿ, ಸಲ್ಲು ಬಾಯ್‌   

ಬೆಂಗಳೂರು: 'ಮನಿಕೆ ಮಗೆ ಹಿತೆ' ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಶ್ರೀಲಂಕಾದ ಗಾಯಕಿ ಯೋಹನಿ, ಹಿಂದಿ ಬಿಗ್‌ಬಾಸ್‌ ಮನೆಗೆ ಹೋಗಿ ಸಲ್ಲು ಬಾಯ್‌ ಅವರಿಗೆ ’ಮನಿಕೆ ಮಗೆ ಹಿತೆ’ ಹಾಡು ಕಲಿಸಿದ್ದಾರೆ.

ಇತ್ತೀಚೆಗಷ್ಟೆ ಭಾರತ ಪ್ರವಾಸ ಕೈಗೊಂಡಿರುವ ಯೋಹನಿ ಎರಡು ದಿನಗಳ ಹಿಂದೆ ಬಾಲಿವುಡ್‌ ನಟಿ ಹಾಗೂಮಾಜಿ ಮಿಸ್ ಶ್ರೀಲಂಕಾ ಆಗಿದ್ದಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಸಲ್ಮಾನ್‌ ಖಾನ್‌ ಅವರನ್ನುಭೇಟಿ ಮಾಡಿದ ಯೋಹನಿ, ಅವರಿಗೆ’ಮನಿಕೆ ಮಗೆ ಹಿತೆ’ ಹಾಡು ಹೇಳಿಕೊಟ್ಟರು. ಸಲ್ಲು ಬಾಯ್‌ ಹಾಡಿರುವ ಸಾಂಗಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ADVERTISEMENT

ಗಾಯಕಿ ಯೋಹನಿ ಅವರು ಮನಿಕೆ ಮಗೆ ಹಿತೆ ಕವರ್ ಹಾಡಿನ ಮೂಲಕ ಇಂಟರ್‌ನೆಟ್‌ ಸ್ಟಾರ್ ಅನ್ನಿಸಿಕೊಂಡಿದ್ದಾರೆ.

ಹಿಂದಿಯ 15ನೇ ಬಿಗ್‌ಬಾಸ್‌ ಸರಣಿ ಕಿರುತೆರೆಯಲ್ಲಿ ಅಕ್ಟೋಬರ್‌ 2ರಿಂದ ಪ್ರಸಾರವಾಗುತ್ತಿದೆ. ಈ ರಿಯಾಲಿಟಿ ಶೋ ಅನ್ನು ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿದ್ದಾರೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.