ADVERTISEMENT

200 ಕಿ.ಮೀ ವೇಗದಲ್ಲಿ ಕಾರು ಚಾಲನೆ ಮಾಡಿದ ಅರವಿಂದ್– ದಿವ್ಯಾ ಜೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2021, 12:42 IST
Last Updated 20 ಅಕ್ಟೋಬರ್ 2021, 12:42 IST
ಕೆ.ಪಿ. ಅರವಿಂದ್ - ದಿವ್ಯಾ ಉರುಡುಗ (ಇನ್‌ಸ್ಟಾಗ್ರಾಂ ಚಿತ್ರ)
ಕೆ.ಪಿ. ಅರವಿಂದ್ - ದಿವ್ಯಾ ಉರುಡುಗ (ಇನ್‌ಸ್ಟಾಗ್ರಾಂ ಚಿತ್ರ)   

ಬೆಂಗಳೂರು: ಬಿಗ್‍ ಬಾಸ್ ಖ್ಯಾತಿಯ ಕೆ.ಪಿ. ಅರವಿಂದ್ - ದಿವ್ಯಾ ಉರುಡುಗ ಒಟ್ಟಿಗೆ ಕಾರ್ ಡ್ರೈವ್‌ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಕೆ.ಪಿ ಅರವಿಂದ್ ಅವರು ಗಂಟೆಗೆ 200 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿದ್ದಾರೆ. ಈ ಕುರಿತಾದ ಫೋಟೊವೊಂದನ್ನು ದಿವ್ಯಾ ಉರುಡುಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಗಂಟೆಗೆ ಸರಾಸರಿ 200 ಕಿ.ಮೀ ವೇಗದಲ್ಲಿ ಚಲಿಸುವ ಕಾರಿನಲ್ಲಿ ನಾನು ಎಂದಿಗೂ ಕುಳಿತಿರಲಿಲ್ಲ. ಈ ನ್ಯಾಷನಲ್ ರೆಕಾರ್ಡ್‍ನಲ್ಲಿ ಭಾಗಿಯಾಗಿರುವುದು ಹೆಚ್ಚು ಖುಷಿ ನೀಡಿದೆ’ ಎಂದು ದಿವ್ಯಾ ಬರೆದುಕೊಂಡಿದ್ದಾರೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.