
ಪ್ರಜಾವಾಣಿ ವಾರ್ತೆ
ನಾಚಿಕೆ ಸ್ವಭಾವದ ಹುಡುಗ ‘ಕೃಷ್ಣ’ ಹಾಗೂ ವಾಚಾಳಿ ಹುಡುಗಿ ‘ವಂಶಿ’ಯ ಮಧ್ಯೆ ಅರಳುವ ಪ್ರೇಮಕಥೆಯ ‘ಕೃಷ್ಣವಂಶಿ’ ಎಂಬ ಧಾರಾವಾಹಿ ಉದಯ ಟಿವಿಯಲ್ಲಿ ಸೋಮವಾರದಿಂದ(ಏ.2) ಆರಂಭವಾಗಿದೆ.
ಧಾರಾವಾಹಿಯಲ್ಲಿ ನಾಯಕ ‘ಕೃಷ್ಣ’ನಾಗಿ ರೋಹನ್ ಎ. ಹಾಗೂ ನಾಯಕಿ ‘ವಂಶಿ’ಯಾಗಿ ಶಾರದಾ ಪುಂಡಿ ಅಭಿನಯಿಸಿದ್ದು, ಗಿರಿಜಾ ಲೋಕೇಶ್, ಹನುಮಂತೇಗೌಡ, ಹಂಸ, ವಿಜಯ್, ರಜಿನಿ ಟಿ.ಡಿ., ಸುಕೃತಾ ನಾಗ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪರಿಣಿತ ಪ್ರೊಡಕ್ಷನ್ ಬ್ಯಾನರ್‌ನಡಿ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ನಿರ್ಮಾಣ ಮಾಡಿರುವ ಈ ಧಾರಾವಾಹಿಯನ್ನು ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 9.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.