ADVERTISEMENT

ಐವರು ಫೈನಲಿಸ್ಟ್‌ಗಳಲ್ಲಿ ಯಾರಿಗೆ ಸಿಗಲಿದೆ ‘ಮಹಾನಟಿ ಸೀಸನ್ 2’ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2025, 5:45 IST
Last Updated 7 ನವೆಂಬರ್ 2025, 5:45 IST
<div class="paragraphs"><p>ಮಹಾನಟಿ ಸೀಸನ್ 2 ಫೈನಲಿಸ್ಟ್‌ಗಳು</p></div>

ಮಹಾನಟಿ ಸೀಸನ್ 2 ಫೈನಲಿಸ್ಟ್‌ಗಳು

   

ಚಿತ್ರ: ಇನ್‌ಸ್ಟಾಗ್ರಾಮ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಟಿ ಸೀಸನ್‌2' ಅಂತಿಮ ಹಂತಕ್ಕೆ ಬಂದು ನಿಂತಿದೆ. ಫೈನಲ್ ಪ್ರವೇಶಿಸಿರುವ ಐವರ ಪೈಕಿ ಯಾರ ಮುಡಿಗೆ ಮಹಾನಟಿ ಕಿರೀಟ ಸೇರಲಿದೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.

ADVERTISEMENT

ಮಹಾನಟಿ ಸೀಸನ್ 2ಕ್ಕೆ ಅಭಿನಯದ ಮೇಲೆ ಆಸಕ್ತಿ ಹೊಂದಿದ್ದ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್‌ಗೆ ಬಂದಿದ್ದರು. ಅದರಲ್ಲಿ ಒಟ್ಟು 16 ಸ್ಪರ್ಧಿಗಳು ಮಹಾನಟಿ ಸೀಸನ್ 2ಕ್ಕೆ ಆಯ್ಕೆ ಆಗಿದ್ದರು.

ಸಿಂಚನಾ. ಆರ್​ ಮೈಸೂರು, ವರ್ಷಾ ಡಿಗ್ರಜೆ ಚಿಕ್ಕೋಡಿ, ಖುಷಿ ಬೆಳಗಾವಿ, ಶ್ರೀಯ ಅಗಮ್ಯ ಮೈಸೂರು, ಪೂಜಾ ರಮೇಶ್​ ಬೆಂಗಳೂರು, ವಂಶಿ ರತ್ನ ಕುಮಾರ್​ ದಕ್ಷಿಣ ಕನ್ನಡ, ತನಿಷ್ಕ ಮೂರ್ತಿ ಮೈಸೂರು, ಬೆಂಗಳೂರಿನ ಭೂಮಿಕ ಟಿ, ಬೀದರ್​ನ ದಿವ್ಯಾಂಜಲಿ, ಚಿಕ್ಕಮಗಳೂರಿನ ಸೌಗಂಧಿಕ, ತೀರ್ಥಹಳ್ಳಿಯ ಮಾನ್ಯ ರಮೇಶ್​, ಬೆಂಗಳೂರಿನ ನಿವಿಕ್ಷ, ಮೈಸೂರಿನ ಪ್ರೇರಣ ವಿ ಪಾಟೀಲ್​, ದಾವಣಗೆರೆಯ ವರ್ಷ ಕೆ.ಪಿ, ಸುಳ್ಯದ ಸಾಯಿಶ್ರುತಿ, ತುಮಕೂರಿನ ದೀಪಿಕಾ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು.

16 ಸ್ಪರ್ಧಿಗಳಲ್ಲಿ ತೀರ್ಪುಗಾರರು ಐವರನ್ನು ಫೈನಲಿಸ್ಟ್‌ಗಳಾಗಿ ಆಗಿ ಆಯ್ಕೆ ಮಾಡಿದ್ದಾರೆ. ಇದೇ ಶನಿವಾರ ಹಾಗೂ ಭಾನುವಾರ ಸಂಜೆ 7 ಗಂಟೆಗೆ ಮಹಾನಟಿ ಸೀಸನ್ 2ರ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ.

ಯಾರು ಆ ಐದು ಫೈನಲಿಸ್ಟ್‌ಗಳು?

ವಂಶಿ, ವರ್ಷ ಡಿಗ್ರಜೆ, ಭೂಮಿಕಾ ತಮ್ಮೇಗೌಡ, ಶ್ರೀಯ ಆಗಮ್ಯ ಹಾಗೂ ಮಾನ್ಯ ರಮೇಶ್ ಈ ಐವರು ಮಹಾನಟಿ ಸೀಸನ್ 2ರ ಟಾಪ್‌ 5 ಫೈನಲಿಸ್ಟ್‌ಗಳು ಆಗಿದ್ದಾರೆ.

ಧಾರಾವಾಹಿಗಳಲ್ಲಿ ನಟಿಸುವ ಅವಕಾಶ

ಈಗಾಗಲೇ ಮಹಾನಟಿಯರಿಗೆ ಈ ಶೋ ಮೂಲಕ ಕನ್ನಡದ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಲಭಿಸಿದೆ. ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಗಟ್ಟಿಮೇಳ, ಕರ್ಣ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶವನ್ನು ತಂಡ ಕಲ್ಪಿಸಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.