ADVERTISEMENT

ಕಾಂಚನ ಅವತಾರದಲ್ಲಿ ವಂಶಿ: ದಸರಾ ಸಂಭ್ರಮ ದುಪ್ಪಟ್ಟು ಮಾಡಿದ ಮಹಾನಟಿಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2025, 7:08 IST
Last Updated 26 ಸೆಪ್ಟೆಂಬರ್ 2025, 7:08 IST
<div class="paragraphs"><p><strong>ಮಹಾನಟಿ ಸ್ಪರ್ಧಿ  ವಂಶಿ ಹಾಗೂ ನಟ,&nbsp;ನಿರ್ದೇಶಕ ತರುಣ್ ಕಿಶೋರ್ ಸುಧೀರ್</strong></p></div>

ಮಹಾನಟಿ ಸ್ಪರ್ಧಿ ವಂಶಿ ಹಾಗೂ ನಟ, ನಿರ್ದೇಶಕ ತರುಣ್ ಕಿಶೋರ್ ಸುಧೀರ್

   

ಚಿತ್ರ: zeekannada

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ರಿಯಾಲಿಟಿ ಶೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾರದಿಂದ ವಾರಕ್ಕೆ ಮಹಾನಟಿಯರು ಭಿನ್ನ ವಿಭಿನ್ನ ಪರಿಕಲ್ಪನೆಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ADVERTISEMENT

ಈ ವಾರ ಮಹಾನಟಿ ಕಾರ್ಯಕ್ರಮದಲ್ಲಿ ದಸರಾ ಸಂಭ್ರಮ ಜೋರಾಗಿದೆ. ಹೀಗಾಗಿ ಮಹಾನಟಿಯರು ಹೊಸ ಹೊಸ ಅವತಾರದಲ್ಲಿ ವೇದಿಕೆ ಮೇಲೆ ಮಿಂಚುವುದಕ್ಕೆ ಸಜ್ಜಾಗಿದ್ದಾರೆ.

ಮಹಾನಟಿ ಸ್ಪರ್ಧಿ ವಂಶಿ

ಝೀ ಕನ್ನಡದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಂದೊಂದೆ ಪ್ರೋಮೊಗಳನ್ನು ಹಂಚಿಕೊಳ್ಳುತ್ತಿದೆ. ಅದರಂತೆ ಮಹಾನಟಿ ಸ್ಪರ್ಧಿಗಳು ವೇದಿಕೆ ಮೇಲೆ ಮೈ ಜುಮ್ಮೆನಿಸುವಂತಹ ಪ್ರದರ್ಶನ ನೀಡಿದ್ದಾರೆ. ಇನ್ನು, ಡ್ರಾಮಾ ಜೂನಿಯರ್ಸ್ ಸೀಸನ್ 2ರ ವಿನ್ನರ್​ ಆಗಿದ್ದ ವಂಶಿ ಈ ಬಾರಿಯ ಮಹಾನಟಿ ಸೀಸನ್ 2ಕ್ಕೆ ಎಂಟ್ರಿ ಕೊಟ್ಟು ಎಲ್ಲರ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ.

ಈ ವಾರ ಕಾಂಚನ ಆಗಿ ವಂಶಿ ಮಹಾನಟಿ ವೇದಿಕೆ ಮೇಲೆ ನೃತ್ಯ ಮಾಡಿದ್ದಾರೆ. ಬಿಡುಗಡೆಯಾದ ಪ್ರೋಮೊದಲ್ಲಿ, ವಂಶಿ ಥೇಟ್‌ ಸಿನಿಮಾದಲ್ಲಿ ನೃತ್ಯ ಮಾಡಿದ ಹಾಗೇ ಅಭಿನಯಿಸಿದ್ದಾರೆ. ವಂಶಿ ಭೀಭತ್ಸ ಅಭಿನಯ ಕಲೆಗೆ ಜಡ್ಜ್‌ಗಳಾದ ತರುಣ್‌ ಸುಧೀರ್, ನಟಿ ಪ್ರೇಮಾ, ನಿಶ್ವಿಕಾ ನಾಯ್ಡು ಹಾಗೂ ರಮೇಶ್ ಅರವಿಂದ್ ಪ್ರಶಂಸಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಝೀ ಕನ್ನಡ ಹಂಚಿಕೊಂಡ ವಿಡಿಯೊಗೆ 1.4 ಮಿಲಿಯನ್‌ ವೀಕ್ಷಣೆ ಬಂದಿದ್ದು, ಮತ್ತೊಂದು ನೃತ್ಯ ಸಂಯೋಜಕ ರುದ್ರ ಮಾಸ್ಟರ್ ಜೊತೆಗೆ ರುದ್ರಿಯಾಗಿ ಕುಣಿದ ವಂಶಿ ವಿಡಿಯೊ ಶುಕ್ರವಾರದ ವೇಳೆಗೆ 2.6 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.