ADVERTISEMENT

‘ಕುಕ್ಕು ವಿತ್‌ ಕಿರಿಕ್ಕು’: ಬರ್ತಿದ್ದಾರೆ ಕುಕ್ಕುಗಳು ಕಿರಿಕ್ಕುಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 19:30 IST
Last Updated 8 ಏಪ್ರಿಲ್ 2021, 19:30 IST
ಕುಕ್ಕು ವಿತ್‌ ಕಿರಿಕ್ಕು ಕಾರ್ಯಕ್ರಮದ ಪೋಸ್ಟರ್‌
ಕುಕ್ಕು ವಿತ್‌ ಕಿರಿಕ್ಕು ಕಾರ್ಯಕ್ರಮದ ಪೋಸ್ಟರ್‌   

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್‌ 10ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ‘ಕುಕ್ಕು ವಿತ್‌ ಕಿರಿಕ್ಕು’ ಹೆಸರಿನ ಅಡುಗೆ ಮತ್ತು ಹಾಸ್ಯ ಪ್ರಧಾನ ಕಾರ್ಯಕ್ರಮ ಪ್ರಸಾರವಾಗಲಿದೆ. ಏ. 10ರಂದು ರಾತ್ರಿ 8.30ಕ್ಕೆ ಕಾರ್ಯಕ್ರಮದ ಆರಂಭದ ಭಾಗ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ಕಿಚ್ಚ ಸುದೀಪ್‌ ಉದ್ಘಾಟಿಸಲಿದ್ದಾರೆ. ಮುಂದೆ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.

ಕಾರ್ಯಕ್ರಮದಲ್ಲಿ ಕಿರಿಕ್‌ ಸೃಷ್ಟಿಸಲಿರುವವರು ಅಕುಲ್‌ ಬಾಲಾಜಿ. ಅಡುಗೆಯವರಾಗಿ ಸಿಹಿಕಹಿ ಚಂದ್ರು ಹಾಗೂ ಅವರ ಜೊತೆ ಖ್ಯಾತ ಶೆಫ್‌ ವೆಂಕಟೇಶ್‌ ಭಟ್‌ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಕಿರುತೆರೆಯ 16 ಖ್ಯಾತ ನಟರು ಅಡುಗೆ ಮಾಡುವುದು, ಪರಸ್ಪರ ಕಾಲೆಳೆಯುವುದು ನಡೆಯಲಿದೆ. ಪ್ರತಿ ಸಂಚಿಕೆಯಲ್ಲಿ ಒಬ್ಬರು ‘ಕುಕ್‌’ ಮತ್ತು ಇನ್ನೊಬ್ಬ ‘ಕಿರಿಕ್‌’ ಜೋಡಿಯಾಗಲಿದ್ದಾರೆ.

ಕಿರುತೆರೆ ನಟಿ ಸುಂದರ್‌ ವೀಣಾ, ನಿರೂಪಕ ಕಿರಿಕ್‌ ಕೀರ್ತಿ, ಚಂದನ್‌, ಕವಿತಾ ಗೌಡ, ವನಿತಾ ವಾಸು, ರೇಖಾ ಮೋಹನ್‌, ಅಪೂರ್ವಾ, ಲಾಸ್ಯಾ ನಾಗರಾಜ್‌ ಅಡುಗೆಯವರಾಗಿ ಭಾಗವಹಿಸಲಿದ್ದಾರೆ.

ADVERTISEMENT

ಕಿರಿಕ್‌ ಮಾಡುವವರ ಸಾಲಿನಲ್ಲಿ ನಟರಾದ ಅರುಣ್‌ ಸಾಗರ್‌, ಪ್ರಥಮ್‌, ಕಾರುಣ್ಯಾ ರಾಮ್‌, ಜಗ್ಗಪ್ಪ, ಚೈತ್ರಾ ವಾಸುದೇವನ್‌, ಅಭಿಜ್ಞಾ ಭಟ್‌ ಇದ್ದಾರೆ ಎಂದು ಸ್ಟಾರ್‌ ಸುವರ್ಣ ವಾಹಿನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.