ADVERTISEMENT

PHOTOS |ನಿನಗಾಗಿ ಧಾರಾವಾಹಿ ಅಂತ್ಯ: ನಟಿ ದಿವ್ಯಾ ಉರುಡುಗ ಭಾವುಕ ವಿದಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 7:10 IST
Last Updated 6 ಅಕ್ಟೋಬರ್ 2025, 7:10 IST
<div class="paragraphs"><p>ನಟಿ ದಿವ್ಯಾ ಉರುಡುಗ</p></div>

ನಟಿ ದಿವ್ಯಾ ಉರುಡುಗ

   

ಚಿತ್ರ: ಇನ್‌ಸ್ಟಾಗ್ರಾಮ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಿನಗಾಗಿ’ ಧಾರಾವಾಹಿ ಮುಕ್ತಾಯಗೊಂಡಿದೆ.

ADVERTISEMENT

ಗಿಣಿರಾಮ ಧಾರಾವಾಹಿ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ, ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ ಉರುಡುಗ ನಾಯಕಿಯಾಗಿ ನಿನಗಾಗಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು.

ನಿನಗಾಗಿ ಧಾರಾವಾಹಿಯಲ್ಲಿ ಸೂಪರ್‌ ಸ್ಟಾರ್‌ ರಚನಾ ಆಗಿ ಮಿಂಚಿದ್ದ ನಟಿ ದಿವ್ಯಾ ಉರುಡುಗ ಸಾಮಾಜಿಕ ಮಾಧ್ಯಮದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ನಟಿ ದಿವ್ಯಾ ಉರುಡುಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಿನಗಾಗಿ ಧಾರಾವಾಹಿ ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ನಿನಗಾಗಿ ಧಾರಾವಾಹಿಯು 2024ರ ಮೇ 27ರಂದು ಪ್ರಸಾರ ಕಂಡಿತ್ತು. 413 ಸಂಚಿಕೆಗಳನ್ನ ಪೂರೈಸಿದ ನಿನಗಾಗಿ ಧಾರಾವಾಹಿ ಜೊತೆಗಿನ ಪ್ರಯಾಣದ ಕುರಿತು ನಟಿ ಭಾವುಕರಾಗಿ ಬರೆದುಕೊಂಡು ವಿದಾಯ ಹೇಳಿದ್ದಾರೆ.

‘ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವನ್ನು ಹಂಚಿಕೊಂಡಾಗ ವಿದಾಯ ಹೇಳುವುದು ದುಃಖದ ಪದವಲ್ಲವೇ?ನಿನಾಗಾಗಿ ಧಾರಾವಾಹಿ ಒಂದು ಅದ್ಭುತ ಪ್ರಯಾಣ. ಜೀವನ ಮತ್ತು ಅನುಭವಗಳಿಂದ ತುಂಬಿದ ಆರೋಗ್ಯಕರ ಯೋಜನೆಯಾಗಿತ್ತು’ ಎಂದರು.

‘ನಾನು ಲೇಡಿ ಸೂಪರ್ ಸ್ಟಾರ್ ರಚನಾ ಆಗಿ  ಪಾತ್ರಕ್ಕೆ ಜೀವ ತುಂಬಿದ್ದೇನೆ. ಮತ್ತು ಸಂಪೂರ್ಣವಾಗಿ ಆನಂದಿಸಿದೆ‌.ಈ ಯೋಜನೆಯನ್ನು ರೂಪಿಸಿದ ಮತ್ತು ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದಿಸುತ್ತೇನೆ. ಕೃತಜ್ಞನಾಗುತ್ತೇನೆ ಮತ್ತು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. 

ಇನ್ನು, ಅನುಬಂಧ ಕಾರ್ಯಕ್ರಮದಲ್ಲಿ ‘ಮನೆ ಮೆಚ್ಚಿದ ಮಗಳು’ ಪ್ರಶಸ್ತಿ ಕೃಷ್ಣಾ ಹಾಗೂ ರಚನಾ ಪಾತ್ರಕ್ಕೆ ಬಂದಿತ್ತು.

ನಿನಗಾಗಿ ಧಾರಾವಾಹಿಯ ಒಂದೊಂದು ಪಾತ್ರವು ಜನಪ್ರಿಯತೆ ಪಡೆದುಕೊಂಡಿತ್ತು. 

ನಿನಗಾಗಿ ಧಾರಾವಾಹಿ ರಚನಾ, ಜೀವಾ, ವಜ್ರೇಶ್ವರಿ, ದೇವಿ ಸೇರಿದಂತೆ ಸಾಕಷ್ಟು ಕಲಾವಿದರಿಗೆ ಹೆಸರು ತಂದು ಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.